ಮಳಿಗೆಗಳಿಗಾಗಿ ಬಿಡ್‌ದಾರರಿಂದ ನಗರಸಭೆ ಮುಂದೆ ಪ್ರತಿಭಟನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಬಿಡ್‌ದಾರರಿಗೆ ಮಳಿಗೆಗಳನ್ನು ಬಿಡಿಸಿಕೊಡಬೇಕೆಂದು ಆಗ್ರಹಿಸಿ ಡಾ.ಸೈಯದ್ ಹಾಸೀಮ್ ಅಶ್ರಫ್ ತಂಡದವರು ಇಲ್ಲಿನ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಒಂದೂವರೆ ವರ್ಷದ ಹಿಂದೆ ನಗರಸಭೆ ಮಳಿಗೆಗಳನ್ನು ಹರಾಜಿನಲ್ಲಿ ಕೂಗಿ ಯಶಸ್ವಿ ಆಗಿದ್ದರೂ ಇದುವರೆಗೂ ಅಂಗಡಿಗಳನ್ನು ಬಿಡ್‌ದಾರರಿಗೆ ಬಿಟ್ಟುಕೊಡದೆ ಪೌರಾಯುಕ್ತರು ಮೀನಾಮೇಷ ಎಣಿಸುತ್ತಿದ್ದು ರಾಜಕೀಯ ಹಾಗೂ ಹಣದ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆಂದು ಡಾ.ಅಶ್ರಫ್ ಆರೋಪಿಸಿದರು .

ಹರಾಜು ಕೂಗಿದ ಮರುಗಳಿಗೆಯೇ ಶೇ .೫೦ ಹಣ ಪಾವತಿ ಆಗಿದ್ದು ೨೦ ದಿನದ ಹಿಂದೆ ಪೂರ್ಣ ಮೊತ್ತ ಪಾವತಿ ಮಾಡಿ ನಗರಸಭೆಯಿಂದ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ದಾಖಲೆಯನ್ನು ನೋಂದಣಿ ಮಾಡಿಸಿದ ನಂತರವೂ ಸಬೂಬು ಹೇಳಲಾಗುತ್ತಿದೆ . ಅಕ್ಟೋಬರ್ ೧ ರಿಂದ ಬಾಡಿಗೆ ಕೊಡಬೇಕೆಂದು ನಗರಸಭೆ ಕರಾರು ಹಾಕಿದ್ದು , ಅಂಗಡಿಗಳನ್ನು ವಶಕ್ಕೆ ಕೊಡದೆಯೇ ಬಾಡಿಗೆ ಪಾವತಿ ಮಾಡುವುದು ಹೇಗೆ ? ನಿಮ್ಮ ಹೆಸರಿನಲ್ಲಿ ಮಳಿಗೆ ನೋಂದಣಿ ಆಗಿದ್ದು ವಶಕ್ಕೆ ಕೊಡಲು ಯಾವುದೇ ಸಮಸ್ಯೆ ಇಲ್ಲ , ಪೌರಾಯುಕ್ತರನ್ನು ಭೇಟಿ ಮಾಡಿ ನೀವು ಮಳಿಗೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರೆ ಪೌರಾಯುಕ್ತರು ನಾನಾ ಕಾರಣಗಳನ್ನು ಕೊಟ್ಟು ಕಾಲ ತಳ್ಳುತ್ತಿದ್ದಾರೆ . ಅಂಗಡಿ ಬಳಿ ಹೋದರೆ ಅನಧೀಕೃತವಾಗಿ ಇರುವ ವ್ಯಾಪಾರಿಗಳು ಪಾಣ ಬೆದರಿಕೆ ಹಾಕುತ್ತಿದ್ದಾರೆ . ಸಾಲ , ಸೋಲ ಮಾಡಿ ಬಡ್ಡಿಗೆ ಹಣ ತಂದು ನಗರಸಭೆಗೆ ಲಕ್ಷಾಂತರ ರೂ . ಕಟ್ಟಿರುವ ನಮ್ಮ ಪಾಡಾದರೂ ಏನು ಎಂದು ಡಾ.ಅಶಫ್ ಪಶ್ನಿಸಿದರು .
ಯಾವುದೇ ರಾಜಕೀಯ ಮತ್ತು ಹಣಬಲಕ್ಕೆ ಮಣಿಯದ ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಯುಕ್ತರು ನಡೆದುಕೊಳ್ಳಬೇಕು . ಅತಿ ಶೀಘ್ರವಾಗಿ ಮಳಿಗೆಗಳನ್ನು ಬಿಡ್‌ದಾರರಿಗೆ ಬಿಡಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು . ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದ ಪೌರಾಯುಕ್ತ ಪ್ರಸಾದ್‌ ಅವರು , ೨೨೦ ಮತ್ತು ೭೮ ಅಂಗಡಿಗಳನ್ನು ನಗರಸಭೆಯಿಂದ ಎರಡು ಸ್ಲಾಬ್‌ನಲ್ಲಿ ಹರಾಜು ಮಾಡಿದ್ದು ಪಿತೃಪಕ್ಷದ ಕಾರಣಕ್ಕಾಗಿ ಅಂಗಡಿ ತೆರವು ಮಾಡಲು ಸಬ್‌ಸ್‌ದಾರರು ಸಮಯಾವಕಾಶ ಕೇಳಿದ್ದರು . ಸೋಮವಾರ ಮತ್ತೊಮ್ಮೆ ಅಂಗಡಿ ಖಾಲಿ ಮಾಡುವಂತೆ ಮೌಕಿಕವಾಗಿ ಎಚ್ಚರಿಕೆ ನೀಡುವ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ . ಇದೀಗ ಅಂಗಡಿಯಲ್ಲಿರುವ ವ್ಯಾಪಾರಿಗಳ ಮೇಲೆ ನನಗೆ ಯಾವುದೇ ಪ್ರೀತಿಯಿಲ್ಲ , ಹೊಸ ಬಿಡ್ ಮಾಡಿರುವ ಮಂದಿಯಾರೂ ನನ್ನ ಶತೃಗಳಲ್ಲ ಎಂಬುದನ್ನು ಡಾ.ಅಶ್ರಫ್ ಅವರು ಅರ್ಥ ಮಾಡಿಕೊಳ್ಳಬೇಕು . ಒಂದೂವರೆ ತಿಂಗಳಲ್ಲಿ ಎಲ್ಲ ಬಿಡ್‌ದಾರರಿಗೂ ಮಳಿಗೆಗಳನ್ನು ಬಿಟ್ಟುಕೊಡಲಾಗುತ್ತದೆ ಎಂದು ಭರವಸೆ ನೀಡಿದರು . ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಮಂಜನಾಥ್ , ನಗರಸಭೆ ಸದಸ್ಯ ಪ್ರಸಾದಬಾಬು , ರಾಕೇಶ್ , ಸುರೇಶ್ , ಕಂದಾಯ ಅಧಿಕಾರಿ ಚಂದ್ರು ಇದ್ದರು
.