ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದ ಪುರಸಭೆ ವತಿಯಿಂದ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಸಲಾಯಿತು.
ಹರಾಜಿನಲ್ಲಿ ದಿನವಹಿ ಮಾರುಕಟ್ಟೆ ವಾರ್ಷಿಕ ರೂ.10.20 ಲಕ್ಷ, ವಾರದ ಸಂತೆ 3.68 ಲಕ್ಷ, ಕಸಾಯಿ ಖಾನೆ ರೂ.8500, ಬಸ್ ನಿಲ್ದಾಣ ಶುಲ್ಕ ರೂ.2.56 ಲಕ್ಷ, ತಾಲ್ಲೂಕು ಕಚೇರಿ ಮುಂಭಾಗದ ಶೌಚಾಲಯ ಶುಲ್ಕ ರೂ.18000, ಪುರಸಭೆ ವಾಣಿಜ್ಯ ಮಾರುಕಟ್ಟೆಯಲ್ಲಿರುವ ಶೌಚಾಲಯ ಶುಲ್ಕ ರೂ.16,000, ಮುಸಾಫಿರ್ ಖಾನಾ ನೆಲಮಹಡಿ ವಾಹನ ನಿಲುಗಡೆ ಶುಲ್ಕ ರೂ.70,000 ಕ್ಕೆ ಹರಾಜು ಮಾಡಲಾಯಿತು.
ಈ ಹರಾಜಿನಿಂದ ಪುರಸಭೆಗೆ ವಾರ್ಷಿಕ ಒಟ್ಟು ರೂ.17.56 ಲಕ್ಷ ವರಮಾನ ಸಿಕ್ಕಿದೆ.
ಪುರಸಭಾದ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಂದಾಯ ನಿಕೀಕ್ಷಕ ವಿ.ನಾಗರಾಜ್, ಎನ್.ಶಂಕರ್, ನಾಗೇಶ್, ವೆಂಕಟೇಶ್, ಸುರೇಶ್, ಮುನಿರಾಜು, ಆನಂದ್ ಇದ್ದರು.