ಶ್ರೀನಿವಾಸಪುರ ಪಟ್ಟಣದ ಪುರಸಭಾ; ರೂ.20,60,000 ಉಳಿತಾಯ ಆಯ ವ್ಯಯಕ್ಕೆ ಒಪ್ಪಿಗೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪುರಸಭೆಯ 2021 – 22ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ರೂ.20,60,000 ಉಳಿತಾಯ ಆಯ ವ್ಯಯಕ್ಕೆ ಒಪ್ಪಿಗೆ ಪಡೆಯಲಾಯಿತು.
ಪುರಸಭೆಯ ಒಟ್ಟು ವಾರ್ಷಿಕ ಆದಾಯ ರೂ.38,36,60,000 ಆಗಿದ್ದು, ಆ ಪೈಕಿ ರೂ.38,16,00,000 ಖರ್ಚು ಮಾಡಲು ಸಭೆ ಹೆಚ್ಚು ಚರ್ಚೆ ಇಲ್ಲದೆ ಅಗೀಕಾರ ನೀಡಿತು. ಮಂಡಿಸಲಾದ ಬಜೆಟ್‍ನಲ್ಲಿ ರಾಜಸ್ವ ಸ್ವೀಕೃತಿಗಳಿಂದ ರೂ.12,60,50,000, ಬಂಡವಾಳ ಸ್ವೀಕೃತಿಗಳಿಂದ ರೂ.16,92,50,000, ಅಸಾಧಾರಣ ಸ್ವೀಕೃತಿಗಳಿಂದ ರೂ.8,83,60,000 ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ಪಾವತಿಗಳಿಗೆ ರೂ.12,19,90,000, ಬಂಡವಾಳ ಪಾವತಿಗಳಿಗೆ 17,15,00,000, ಅಸಾಧಾರಣ ಪಾವತಿಗಳಿಗೆ ರೂ.8,81,10,000 ಖರ್ಚು ಮಾಡಲು ನಿರ್ಧರಿಸಲಾಗಿದೆ.
ಪುರಸಭೆಯ ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವಿ.ರೆಡ್ಡಿ, ಅಪ್ಪೂರು ರಾಜಣ್ಣ, ನಾಗರಾಜ್, ಸರ್ದಾರ್, ಜಯಲಕ್ಷ್ಮಿ, ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪೃಥ್ವಿರಾಜ್, ಸಿಇಒ ರಾಜೇಶ್ವರಿ, ಪ್ರತಾಪ್, ಶಂಕರ್, ನಾಗೇಶ್ ಇದ್ದರು.