ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆಯ ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್ ಶುಕ್ರವಾರ ದಾಳಿ ನಡೆಸಿ ದಂಡ ವಿಧಿಸಿದರು.
ನಿಷೇಧಿತ ಪ್ಲಾಸ್ಟಿಕ್ ಕವರ್ನಲ್ಲಿ ವಸ್ತುಳನ್ನು ಕೊಂಡೊಯ್ಯುತ್ತಿದ್ದ ಸಾರ್ವಜನಿಕರಿಗೆ ತಲಾ ರೂ.200 ದಂಡ ವಿಧಿಸಲಾಯಿತು. ಅಂಗಡಿ ಮಾಲೀಕರಿಗೆ ದಾಸ್ತಾನು ಮಾಡಲಾಗಿದ್ದ ವಸ್ತುಗಳ ಗಾತ್ರದ ಆಧಾರದ ಮೇಲೆ ದಂಡ ವಿಧಿಸಲಾಯಿತು. ಒಟ್ಟು ರೂ.10 ಸಾವಿರ ದಂಡ ವಸೂಲು ಮಾಡಲಾಯಿತು ಎಂದು ಹೇಳಿದರು.
ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಸಂಕಲ್ಪ ಮಾಡಲಾಗಿದೆ. ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಪುರಸಬೇ ಕೈಗೊಂಡಿರುವ ಸಂಕಲ್ಪ ಫಲಕಾರಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.