ಶ್ರೀನಿವಾಸಪುರ: ಪಟ್ಟಣದ ಜಗಜೀವನ ಪಾಳ್ಯದ ವಾರ್ಡ್ ನಂ. 20 ಪುರಸಭೆ ಸಭೆ ಸದಸ್ಯೆ ವಿ.ಲೀಲಾವತಿ ಶ್ರೀನಿವಾಸ್ ಕೂಡಲೇ ರಾಜಿನಾಮೆ ನೀಡಬೇಕು ಇವರ ಸದಸ್ಯತ್ವವನ್ನು ರದ್ದಪಡಿಸಬೇಕೆಂದು ಈ ಬಾಗದ ಜನತೆ ಮತ್ತು ಎಂ ಶ್ರೀನಿವಾಸನ್ ಅಭಿಮಾನಿಗಳು ಸದಸ್ಯೆ ಮನೆಯ ಮುಂದೆ ಧರಣಿ ಮಾಡಿ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಿದರು.
ಇದೇ ಸಮಯದಲ್ಲಿ ವಾರ್ಡ್ ನಾಗರೀಕ ಪುನಿತ್ ಮಾತನಾಡಿ ಕೌನ್ಸಲರ್ ಎಂ. ಶ್ರೀನಿವಾಸನ್ ಕೊಲೆಯಾದ ಕಳೆದ ನಾಲ್ಕು ತಿಂಗಳಿನಿಂದ ನಾಪತ್ತೆಯಾದ ಜಗಜೀವನಪಾಳ್ಯ, ದಯಾನಂದರಸ್ತೆ, ರಂಗರಸ್ತೆ, ಪುರಸಭೆ ಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ರವರು ನಿನ್ನೆ ಬಡವಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಾರ್ಡ್ ನಂ-20 ನಾಗರೀಕರ ಕಷ್ಟಗಳನ್ನು ಕೇಳುವವರು ಇಲ್ಲದೆ ಅನಾಥರಾಗಿದ್ದಾರೆ.
ವಾರ್ಡ್ನ ನಾಗರೀಕ ಸುಬ್ರಮಣಿ ಮಾತನಾಡಿ ಕೌನ್ಸಿಲರ್ ಎಂ.ಶ್ರೀನಿವಾಸನ್ರವರ ಕೊಲೆ ಪ್ರಕರಣದಲ್ಲಿ ಪುರಸಭೆ ಸದಸ್ಯರಾಗಿರುವ ಲೀಲಾವತಿ ಶ್ರೀನಿವಾಸ್ ರವರ ಮಗ ಚಂದನ್ ನನ್ನು ಸಹಾ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿರುವ ಕಾರಣ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕೊಲೆ ಪ್ರಕರಣದಲ್ಲಿ ಯಾರು ಯಾರು ಇದ್ದರೂ ಅವರು ಈ ಭಾಗದಲ್ಲಿ ಇರಬಾರದು ಎಂದು ಒತ್ತಾಯಿಸಿ, ಆರೋಪಿಗಳು ಯಾವುದೇ ಕಾರಣಕ್ಕೂ ಬರಬಾರದು. ಅವರು ಬಂದರೆ ಅನಾಹುತಗಳ ಆಗುವುದು ಗ್ಯಾರಂಟಿ ಎಂದು ಎಚ್ಚರಿಸಿದರು. ಜಿಲ್ಲಾಡಳಿತ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯೆ ವಿ.ಲೀಲಾವತಿ ಶ್ರೀನಿವಾಸ್ ಮನೆಯ ಮುಂದೆ ತಮಟೆ ಬಾರಿಸಿಕಂಡು ಧರಣಿ ಮಾಡಿ ಪ್ರತಿಕೃತಿ ದಹನ ಮಾಡಿ ಕೂಡಲೇ ರಾಜೀನಾಮೆಗೆ ಒತ್ತಾಯಿಸಿ ದಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ರವರಿಗೆ ಲೀಲಾವತಿ ಶ್ರೀನಿವಾಸ್ ರವರನ್ನ ಸದಸ್ಯತ್ವ ದಿಂದ ರದ್ದು ಮಾಡಬೇಕು ಎನ್ನುತ್ತಾ ಹಾಗೂ ಪೆÇಲೀಸ್ ನಿರೀಕ್ಷಕ ಮಹಮ್ಮದ್ ಎಂ.ಬಿ.ಗೊರವನಕೊಳ್ಳರವರಿಗೆ ಕಾನೂನು ರೀತ್ಯ ಕ್ರಮಕೈಗೊಳ್ಳಲು ಮನವಿ ಪತ್ರ ಸಲ್ಲಿಸಿದರು.
ಇದೇ ಸಮಯದಲ್ಲಿ ಪೊಲೀಸ್ ನಿರೀಕ್ಷಕ ಮಹಮ್ಮದ್ ಎಂ.ಬಿ.ಗೊರವನಕೊಳ್ಳ ಪ್ರತಿಭಟನಕಾರರರೊಂದಿಗೆ ಮಾತನಾಡಿ ನಾಗರೀಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತಗೆದುಕೊಳ್ಳಬೇಡಿ ನಿಮ್ಮ ಬೇಡಿಕೆಗಳನ್ನು ಕಾನೂನು ರೀತ್ಯ ಪರಿಹರಿಸಲಾಗುವುದು ಎಂದು ತಿಳಿಸಿದರು.