ಮುಂಬೈ: ಮುಂಬೈನಲ್ಲಿ ಮುಂಬೈನಲ್ಲಿ ಧೂಳು ಸಹಿತ ಬಿರುಗಾಳಿಯದ್ದಿದ್ದು, ಗಾಳಿಯ ರಭಸಕ್ಕೆ ಇಂದು ಸಂಜೆ 4.30ರ ಸುಮಾರಿಗೆ ಬೃಹತ್ ಹೋರ್ಡಿಂಗ್ ಕುಸಿದಿದ್ದರಿಂದ ಸುಮಾರು 100 ಜನರು ಅದರಡಿ ಸಿಕ್ಕಿಬಿದ್ದಿದ್ದಾರೆ. ಪಂತ್ ನಗರದ ಪೂರ್ವ ಎಕ್ಸ್ಪ್ರೆಸ್ ಹೆದ್ದಾರಿ ಬಳಿ ಇರುವ ಜಾಹೀರಾತು ಫಲಕವು ಪೆಟ್ರೋಲ್ ಪಂಪ್ ಮೇಲೆ ಕುಸಿದಿದೆ. ಇದರಿಂದ ನಾಲ್ವರು ಮೃತಪಟ್ಟಿದ್ದು, 59 ಜನರು ಗಾಯಗೊಂಡಿದ್ದಾರೆ.
ಹೋರ್ಡಿಂಗ್ ಪೆಟ್ರೋಲ್ ಪಂಪ್’ನ ಸ್ಟ್ಯಾಫೋಲ್ಡಿಂಗ್ ಮತ್ತು ಪಂಪ್ ನಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳನ್ನು ಹಾನಿಗೊಳಿಸಿದೆ. ಸದ್ಯ 12 ಅಗ್ನಿಶಾಮಕ ವಾಹನಗಳು. ಮತ್ತು ಎರಡು ಕ್ರೇನ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಪೆಟ್ರೋಲ್ ಪಂಪಿನಲ್ಲಿ ಈ ಘಟನೆ ನಡೆದಿರುವುದರಿಂದ ಕಟರ್ ಗಳನ್ನು ಬಳಸುವಂತಿಲ್ಲ. ಕ್ರೇನ್ ಬಳಸಿ ಬಿಲ್ಬೋರ್ಡ್ನ ಮುರಿದ ತುಂಡುಗಳನ್ನು ಮೇಲಕ್ಕೆತ್ತಲಾಗುತ್ತಿದೆ. ಗಾಯಾಳುಗಳನ್ನು ರಾಜವಾಡಿ ಮತ್ತು HBT ಆಸ್ಪತ್ರೆಗೆ ದಾಖಲಿಸಲಾಗಿದೆ.
NDRF ಅಧಿಕಾರಿಗಳ ಒಂದು ತಂಡವನ್ನು ಘಾಟ್ಕೋಪರ್ನಲ್ಲಿ ನಿಯೋಜಿಸಲಾಗಿದೆ. ಇದುವರೆಗೆ ಒಟ್ಟು 67 ಜನರನ್ನು ರಕ್ಷಿಸಲಾಗಿದೆ” ಎಂದು ತಿಳಿದು ಬಂದಿದೆ. ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.