ಜನವರಿ 6 ಮುಳಬಾಗಿಲು ತಾಲ್ಲೂಕಿನ ಎನ್ , ವಡ್ಡಹಳ್ಳಿ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೊಂದಿಗೆ ‘ ರೈತರೊಂದಿಗೊಂದು ದಿನ ‘ ಕಾರ್ಯಕ್ರಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜನವರಿ 6 ರಂದು ಮುಳಬಾಗಿಲು ತಾಲ್ಲೂಕಿನ ಎನ್ , ವಡ್ಡಹಳ್ಳಿ ಗ್ರಾಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರೊಂದಿಗೆ ‘ ರೈತರೊಂದಿಗೊಂದು ದಿನ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಕಾರ್ಯಕ್ರಮದಲ್ಲಿ ಕೃಷಿ ಸಚಿವರು ಮತ್ತು ನಾನು ದೈನಂದಿನ ಕೃಷಿ ಚಟುವಟಿಕೆಯಲ್ಲಿ ಸ್ವತ : ಭಾಗಿಗಳಾಗಿ ರೈತ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಆಲಿಸಿ ಪರಿಹಾರ ನೀಡಲಾಗುವುದು . ಕಾರ್ಯಕ್ರಮಕ್ಕೆ ಸುಮಾರು 4 ಸಾವಿರ ಜನ ಸೇರುವ ನಿರೀಕ್ಷೆ ಇದೆ . ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಒಂದು ದಿನ ಪೂರ್ತಿ ರೈತರೊಂದಿಗೆ ಇರುತ್ತೇವೆ . ಗೂಗಲ್ ಮೀಟ್ ಮೂಲಕ ರೈತ ಸಂಪರ್ಕ ಕೇಂದ್ರಗಳಲ್ಲಿನ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಅಂದು 3,00 ಗಂಟೆಯಿಂದ 4.00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು . ಕೋಲಾರ ಜಿಲ್ಲೆಯ ಖಷ್ಠಿ ಕೃಷಿಗೆ ಪ್ರಾಮುಖ್ಯತೆ ನೀಡಿದ ಜಿಲ್ಲೆಯಾಗಿದ್ದು , ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನೀರಾವರಿ ಮೂಲಗಳಿಲ್ಲದೆ ಅಂತರ್ಜಲಮಟ್ಟವು ಕುಸಿದಿದೆ . ಆದರೂ ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಕೋಲಾರ ರೈತರು ಕೃಷಿ , ತೋಟಗಾರಿಕೆ , ರೇಷ್ಮೆ ಮತ್ತು ಪಶುಸಂಗೋಪನೆಗಳೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶ್ವಸಿಯಾಗಿದ್ದಾರೆ . ಜಿಲ್ಲೆಯಲ್ಲಿ ರಾಗಿ , ತೊಗರಿ , ಅವರೆ , ಅಲಸಂದೆ , ನೆಲಗಡಲೆ , ಟೊಮೋಟೊ ಹಾಗೂ ಮಾವು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ ಎಂದು ಮಾಹಿತಿ ನೀಡಿದರು , ಕಾರ್ಯಕ್ರಮದ ದಿನ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆಧುನಿಕ ಕೃಷಿ ಮಾಡುತ್ತಿರುವ ಅಶ್ವಥಮ್ಮ ಹಾಗೂ ಬಾಬು ಅವರು ತಾಕಿಗೆ ಭೇಟಿ ನೀಡಿ ವಿಕ್ಷೀಸಲಾಗುವುದು . ಹುಲ್ಲನ್ನು ಚಾಫ್ ಕಟರ್‌ನಿಂದ ಕತ್ತರಿಸಿ ಹಸುಗಳಿಗೆ ತಿನ್ನಿಸುವುದು ಮತ್ತು ಹಾಲನ್ನು ಕರೆಯುವುದು , ರೇಷ್ಮೆ ಸಾಕಾಣಿಕೆ , ಹಸಿರೆಲೆ ಗೊಬ್ಬರ ಬಿತ್ತನೆ , ಆಲೂಗಡ್ಡೆ , ಟೊಮೋಟೊ , ಕೊತ್ತಂಬರಿ ಬೀಜ ಬಿತ್ತನೆ , ತೊಗರಿ ಕಟಾವು , ಸೊಗಡು ಅವರೆ ಕಾಯಿ ಬಿಡಿಸುವುದು ಇನ್ನೂ ಮುಂತಾದ ಕೃಷಿ ಚಟುವಟಿಕೆ ಕಾರ್ಯಗಳನ್ನು ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು , ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , ಇದೊಂದು ಸುಗ್ಗಿಯ ಕಾರ್ಯಕ್ರಮವಾಗಿದ್ದು , ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು . ಎರಡನೇಯದಾಗಿ ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮದಲ್ಲಿ ಕೃಷಿಯನ್ನು ಹೇಗೆ ಲಾಭದಾಯವಾಗಿ ಮಾಡಬಹುದು ಎಂಬುದನ್ನು ಮಾನ್ಯ ಕೃಷಿ ಸಚಿವರು ತಿಳಿಸುವರು , ಕೋಲಾರ ಜಿಲ್ಲೆಯ ರೈತರು ಸ್ವಾಭಿಮಾನಿಗಳಾಗಿದ್ದು , ಅಂತರ್‌ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಒಂದು ಬೆಳೆ ಕೈಕೊಟ್ಟರು ಮತ್ತೊಂದು ಬೆಳೆಯಲ್ಲಿ ಲಾಭ ಗಳಿಸುತ್ತಾರೆ ಎಂದು ಕೃಷಿ ಸಚಿವರು ಕೋಲಾರದ ರೈತರನ್ನು ಇತರೇ ಜಿಲ್ಲೆಗಳಲ್ಲಿ ಉದಾಹರಣೆಯಾಗಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು . ಕೃಷಿಯ ಆರೋಗ್ಯಕರ ಚಟುವಟಿಕೆಗಳನ್ನು ಕಾರ್ಯಕ್ರಮದ ದಿನ ಹಮ್ಮಿಕೊಳ್ಳಲಾಗಿದೆ . ರೈತನ ಜೊತೆಗೆ ಅವರ ಮಡದಿಯು ಎಲೆಮರೆ ಕಾಯಿಯಾಗಿ ದುಡಿಯುತ್ತಾಳೆ . ಆದ್ದರಿಂದ ರೈತ ಮಹಿಳೆಯೂ ಸೇರಿದಂತೆ ರೈತ ದಂಪತಿಗಳಿಗೆ ಸನ್ಮಾನ ಮಾಡಲಾಗುವುದು . ಕೃಷಿಯನ್ನು ಹೇಗೆ ಋಷಿಯಾಗಿ ಮಾಡುವುದು ಎಂಬುದನ್ನು ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ . ರೈತರು ಹೆಚ್ಚು ಹೆಚ್ಚು ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಿ ಹೆಚ್ಚು ಲಾಭ ಗಳಿಸಬೇಕು ಎಂದು ತಿಳಿಸಿದರು . ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾದೇವಿ ಅವರು ಮಾತನಾಡಿ ಮುಂಗಾರು ಬೆಳೆ ಸಮೀಕ್ಷೆ ಯಶಸ್ವಿಯಾಗಿದೆ . ಈಗ ಹಿಂಗಾರು ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು , ಖಾಸಗಿ ನಿವಾಸಿಗಳು ಜಮೀನಿನ ಸರ್ವೇಗೆ ಬಂದಾಗ ಮೂಲ ಆಧಾರ್‌ ಕಾರ್ಡ್‌ನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ನೀಡುವ ಮೂಲಕ ಆಧಾರ್ ನಂಬರ್‌ನ್ನು ಫೀಡ್ ಮಾಡಿಸಬೇಕು ಎಂದು ಮನವಿ ಮಾಡಿದರು . ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಗಾಯಿತ್ರಿ ಅವರು ಉಪಸ್ಥಿತರಿದ್ದರು .