ಕುಂದಾಪುರದಲ್ಲಿ ಮೂಳೆ ತಪಾಸಣೆ ಕಾರ್ಯಗಾರ: ಸೌಂಧರ್ಯಕಿಂತ ಆರೋಗ್ಯ ಮುಖ್ಯ :ಫಾ|ಸ್ಟ್ಯಾನಿ ತಾವ್ರೊ
ಕುಂದಾಪುರ,ಮಾ.7: ‘ಹೆಚ್ಚಿನ ಜನರು ತಮ್ಮ ಸೌಂಧರ್ಯ ಕಾಪಾಡಿಕೊಳ್ಳುವುದರಲ್ಲೇ ಹೆಚ್ಚಿನ ಅಸಕ್ತಿ ಹೊಂದುತ್ತಾರೆ, ದೇಹದ ರೂಪ ಬದಲಾಗಿದೆಯೇ ಎಂಬ ಚಿಂತೆಯೆ ಅವರನ್ನು ಕಾಡುತ್ತದೆ, ಆದರೆ ನಮ್ಮ ದೇಹ ಗಟ್ಟಿ ಮುಟ್ಟಾಗಿರಬೇಕು ಅದಕ್ಕೆ ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದು, ಮೂಳೆಗಳು ಕೂಡ ಸಧ್ರಡವಾಗಿರ ಬೇಕೆಂಬುದು ಅತ್ಯಂತ ಮುಖ್ಯವಾಗಿದೆ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ’ ಹೇಳಿದರು. ಅವರು ಕುಂದಾಪುರ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಚರ್ಚಿನ ಆರೋಗ್ಯ ಆಯೋಗದ ಜಂಟಿ ಅಶ್ರಯದಲ್ಲಿ ಕಾರಿತಾಸ್ ಇಂಡಿಯಾ ಮತ್ತು ಸಂಪದ ಉಡುಪಿಯ ಆರೋಗ್ಯ ಯೋಜನೆಯಡಿ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಕುಂದಾಪುರ ಚರ್ಚಿನ ಮಿನಿ ಸಭಾ ಭವನದಲ್ಲಿ ಮೂಳೆಗಳ ತಪಾಸಣೆ ಕಾರ್ಯಗಾರ ಉದ್ಘಾಟಿಸಿ ‘ನಮ್ಮ ನ್ಯೂನತೆಗಳನ್ನು ಕಂಡು ಅದಕ್ಕೆ ಪರಿಹಾರ ದೊರಕಿಸಿಕೊಳ್ಳಲು ಇಂತಹ ಶಿಬಿರಗಳು ಅಗತ್ಯವಾಗಿವೆ’ ಎಂದು ನುಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪ್ರಕಾಶ್ ಅಂದ್ರಾದೆ ‘ಮೂಳೆ ಸಾಂದ್ರತಾ ತಪಾಸಣೆಯಿಂದ ನಿಮ್ಮ ಮೂಳೆಗಳ ಶಕ್ತಿಯನ್ನು ತಿಳಿದುಕೊಳ್ಳಬಹುದು, ಮಾತ್ರವಲ್ಲಾ ದೇಹಕ್ಕೆ ಬೇಕಾದ ಕೊಲೆಸ್ಟ್ರೊಲ್ ಕೊರತೆ, ಅಗತ್ಯತೆ ಕಂಡುಕೊಳ್ಳ ಬಹುದು, ಇಂತಹ ಶಿಬಿರಗಳಿಂದ ಹಲವಾರು ಜನರಿಗೆ ಪ್ರಯೋಜನವಾಗಿದ್ದು, ಇಂತಹ ಕಾರ್ಯಗಾರಗಳಿಗೆ ತುಂಬ ಬೇಡಿಕೆಯಿದೆ’ ಎಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಕಾರ್ಯಗಾರವನ್ನು ಆಶಿರ್ವದಿಸಿದರು. ಉಡುಪಿ ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್, ಕುಂದಾಪುರ ಸ್ತ್ರೀ ಸಂಘಟನೇಯ ಸಚೇತಕಿ ಸಿಸ್ಟರ್ ಪ್ರೇಮಲತಾ, ಆಯೋಗಗಳ ಸಂಯೋಜಕಿ ಪ್ರೇಮ ಡಿಕುನ್ಹಾ ಉಪಸ್ಥಿತರಿದ್ದರು. ಕಥೊಲಿಕ್ ಸಂಘಟನೇಯ ಉಪಾಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿದರು, ಅಧ್ಯಕ್ಷೆ ಶಾಂತಿ ರಾಣಿ ಬಾರೆಟ್ಟೊ ಕಾರ್ಯಕ್ರಮ ಸಂಘಟಿಸಿದ್ದರು, ಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಗಾರದಲ್ಲಿ ಮೂಳೆ ತಪಾಸಣೆಯನ್ನು ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಯ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಮತ್ತು ಮಧುಕೇಶ್ವರ್ ನೆಡೆಸಿಕೊಟ್ಟರು. ಆರೋಗ್ಯ ಆಯೋಗದ ಸಂಚಾಲಕಿ ಐರಿನ್ ಬಾರೆಟ್ಟೊ ವಂದನೆಗಳನ್ನು ಸಲ್ಲಿಸಿದರು.