JANANUDI.COM NETWORK

ಕುಂದಾಪುರ, ಎ.21: ಕುಂದಾಪುರ ಪಟ್ಟಣ ಭಾಗದಲ್ಲಿ ಕುಂದಾಪುರ ಚರ್ಚ್ ಸಮೀಪದ ಟೋಲ್ಬರ್ಟ್ ಗೊನ್ಸಾಲ್ವಿಸ್ ಅವರ ಸ್ಥಳದಲ್ಲಿ ಕುಂದಾಪುರದ ಹಿತಾ ಇನ್ಫ್ರಾಟೆಕ್ ಡೆವಲಪರ್ಸ್ ಸಂಸ್ಥೆಯ ವಸತಿ ಸಮುಯುಚ್ಚ ಹಿತಾ ಟ್ವೀನ್ಸ್ ಪೆರಾಡೈಸ್ ಎಂಬ ಕಟ್ಟಡದ ಯೋಜನೆ ಅಭಿವ್ರದ್ದಿಗಾಗಿ ಮೂಹುರ್ತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಆಶಿರ್ವವಚಿಸಿ “ಈ ಬ್ರಹತ್ ಯೋಜನೆಯು ಯಾವುದೇ ಆತಂಕ ಇಲ್ಲದೆ ಸಾಂಘವಾಗಿ ನೇರವೇರಲಿ, ಇಲ್ಲಿ ನೆಲೆಸುವರು ಸುಖ ಸಂತೋಷದಿಂದ ನೆಲಸಲಿ’ ಎಂದು ಶುಭ ಕೋರಿದರು.
“ಈ ಹಿತಾ ಟ್ವಿನ್ಸ್ ಪಾರಾಡೈಸ್ ಸಮಯುಚ್ಚ ಯೋಜನೆಯು ಹಿತಾ ಇನ್ಫ್ರಾಟೆಕ್ ಡೆವಲಪರ್ಸ್ ಸಂಸ್ಥೆಯ ಎರಡನೇ ಯೋಜನೆಯಾಗಿದ್ದು, ಮೊದಲ ಯೋಜನೆ ಶ್ರೀದೇವಿ ನರ್ಸಿಂಗ್ ಹೋಮ್ ಹತ್ತಿರ ಹಿತಾ ಹಾರ್ಮೊನಿ ವಸತಿ ಸಮಯುಚ್ಚ ಯೋಜನೆಯಾಗಿದ್ದು ಇದು ಪೂರ್ಣಗೊಳಿಸಿ ಕುಂದಾಪುರ ನಗರಕ್ಕೆ ಕೊಡುಗೆಯಾಗಿ ನೀಡಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಗದ ಮಾಲೀಕರದಾದ ಟೊಲ್ಬರ್ಟ್ ಗೊನ್ಸಾಲ್ವಿಸ್ ಅವರ ಪತ್ನಿ ಡೊರೊತಿ ಗೊನ್ಸಾಲ್ವಿಸ್, ಮಕ್ಕಳಾದ ಡೆಸ್ಮಂಡ್ ಗೊನ್ಸಾಲ್ವಿಸ್, ಡಿಂಪಲ್ ಗೊನ್ಸಾಲ್ವಿಸ್, ಸಿನಿ ನೆಲ್ಸನ್, ಡೆರಿಕ್ ಗೊನ್ಸಾಲ್ವಿಸ್, ಮತ್ತು ನಿಮಿಷ ಗೊನ್ಸಾಲ್ವಿಸ್, ಹಿತಾ ಇನ್ಫ್ರಾಟೆಕ್ ಡೆವಲಪರ್ಸ್ ಸಂಸ್ಥೆಯ ಮುಖ್ಯಸ್ಥ ಕಿರಣ್ ನಾಯ್ಕ್ ಅವರ ಪತ್ನಿ ಪೂರ್ಣಿಮಾ, ಪಾಲುದಾರರಾದ ಪ್ರವೀಣ್ ಟಿ. ದಾಮೋದರ್ ಪೈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಮೂಹುರ್ತಾ ಕಾರ್ಯಕ್ರಮದಲ್ಲಿ ಧರ್ಮಭಗಿನಿಯರು ಮತ್ತು ಹಲವರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.







