

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಾವ್ರಾಡಿ ಗ್ರಾಮದ ತುಳಸಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ, ಹಳ್ನಾಡಿನಲ್ಲಿ ಜೇಸಿಐ ಶಂಕರನಾರಾಯಣ ಮತ್ತು ಗೆಳೆಯರ ಬಳಗ ಶಂಕರನಾರಾಯಣ ಇವರ ಸಹಯೋಗದಲ್ಲಿ ಇಂದು ಮುದ್ದು ರಾಧೆ- ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.
ವೇದಮೂರ್ತಿ ಶ್ರೀ ಶ್ರೀನಿವಾಸ ಅಡಿಗ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
0 -4, 4 -7, ಹಾಗೂ 7 -10 ವರ್ಷದ ಒಳಗಿನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 100 ಕ್ಕೂ ಅಧಿಕ ಮುದ್ದು ರಾಧೆ – ಮುದ್ದು ಕೃಷ್ಣ ವೇಷ ಧರಿಸಿದ ಚಿಕ್ಕ ಮಕ್ಕಳು ಪಾಲಕರೊಂದಿಗೆ ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಆಕರ್ಷಕ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
4 ವರ್ಷದೊಳಗಿನ ವಿಭಾಗದಲ್ಲಿ ಪ್ರಣಮ್ಯ B, ಸಿಂಚಿತಾ ಪ್ರಥಮ, ವೇದಾರ್ಥ,ನಿಕ್ಷೀತಾ ದ್ವಿತೀಯ ಹಾಗೂ 4 ರಿಂದ 7 ವರ್ಷದೊಳಗಿನ ವಿಭಾಗದಲ್ಲಿ ಆಯುಷ್,ಧ್ವನಿ K ಪ್ರಥಮ, ಆರಾದ್ಯ,ನಿಯಾನ್ಶ್ ದ್ವಿತೀಯ ಮತ್ತು 7 ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ಆರ್ಯನ್, ಮಹಾಲಸಾ.B.ಭಟ್ ಪ್ರಥಮ,ಸಿಂಚರ, ಕವನ ದ್ವಿತೀಯ ಬಹುಮಾನವನ್ನು ಪಡೆದು ಮಿಂಚಿದರು.
ತೀರ್ಪುಗಾರರಾಗಿ ಹಳ್ನಾಡಿನ ನಿವೃತ್ತ ಶಿಕ್ಷಕರಾದ ವಿಶ್ವನಾಥ್ ಶೆಟ್ಟಿ, ಕಲಾವಿದೆಯಾದ ಶ್ರೀಮತಿ ಸುಪ್ರೀತಾ ಪುರಾಣಿಕ್, ಹಾಗೂ ಶಾಂತಿಧಾಮ ಗುರುಕುಲದ ಶಿಕ್ಷಕಿಯಾದ ಶ್ರೀಮತಿ ನಾಗರತ್ನ ಉಡುಪ ರವರು ಆಗಮಿಸಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀನಿವಾಸ ಅಡಿಗರು, ತುಳಸಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀಯುತ ಕೃಷ್ಣರಾಯ ಶ್ಯಾನುಬಾಗ್, ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ರೇಷ್ಮ ಪ್ರದೀಪ್ ರವರು ಉಪಸ್ಥಿತರಿದ್ದರು. ತುಳಸಿ ಶಾಲೆಯ ಶಿಕ್ಷಕರಾದ ಹರ್ಷ ಕೋಟೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣರಾಯ ಶ್ಯಾನುಬಾಗ್ ರವರು ವಂದಿಸಿದರು.
ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕ, ಶಿಕ್ಷಕೇತರರು ಸಂಯೋಜನೆ ಮಾಡಿ ಸಹಕರಿಸಿದರು