ಎಂ.ಬಿ.ಎ ವಿಭಾಗ ಎಂ.ಐ.ಟಿ.ಕೆ, ಮೂಡ್ಲಕಟ್ಟೆ, ಕುಂದಾಪುರ ವಿದ್ಯಾರ್ಥಿಗಳಿಗೆ ಎಂ.ಎಸ್ ಎಕ್ಸೆಲ್ ಕುರಿತು ಕಾರ್ಯಾಗಾರ ನಡೆಯಿತು. ಶ್ರೀ ಅನಂತ್ ನಾಯ್ಕ್, ಜನತಾ ಗ್ರೂಪ್ಸ್ ಸಹಾಯಕ ವ್ಯವಸ್ಥಾಪಕ (ವ್ಯವಹಾರ ಬೆಂಬಲ), ಕೋಟ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಂ.ಎಸ್ ಎಕ್ಸೆಲ್ ಕುರಿತು ಸಂಕ್ಷಿಪ್ತ ಪರಿಚಯದೊಂದಿಗೆ ಕಾರ್ಯಾಗಾರವನ್ನು ಪ್ರಾರಂಭಿಸಿದ ಅವರು ಉತ್ತಮ ಉದಾಹರಣೆಗಳೊಂದಿಗೆ ಕಂಪನಿಗಳಲ್ಲಿ ಎಕ್ಸೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದರು. ಅವರು ಸೆಲ್ ಉಲ್ಲೇಖ ಮತ್ತು ರೆಫರೆನ್ಸ್ ಬೋಡ್‍ಮಾಸ್ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೊ.ಅಮೃತಮಲಾ ಸ್ವಾಗತಿಸಿ, ಪ್ರೊ.ತಿಲಕಲಕ್ಷ್ಮಿ ಸಂಪನ್ಮೂಲ ವ್ಯಕ್ತಿಯವರಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪನ್ನಗಾ ನಿರೂಪಿಸಿದರು.