

ಕುಂದಾಪುರದ ಬೇಳೂರಿನವರಾಗಿದ್ದು ಹೊಸಪೇಟೆಯ ಶ್ಯಾನುಭಾಗ ಇಂಟರ್ನ್ಯಾಶನಲ್ ಹೋಟೆಲ್ ಉದ್ಯಮ ಸಹಿತ ವಿವಿಧ ಉದ್ಯಮ ನಡೆಸುತ್ತಿರುವ ಬೇಳೂರು ಕಮಲಾಕ್ಷ ಶ್ಯಾನುಭಾಗರ ಧರ್ಮಪತ್ನಿ, ಶ್ಯಾನುಭಾಗ ಉದ್ಯಮ ಸಂಸ್ಥೆಗಳ ಪಾಲುದಾರರೂ ಆಗಿರುವ ಶ್ರೀಮತಿ ಲಕ್ಷ್ಮೀದೇವಿ ಶ್ಯಾನುಭಾಗ (70) ಸೆಪ್ಟೆಂಬರ್ 14 ರಂದು ನಿಧನರಾದರು.
ದೈವಭಕ್ತರೂ, ಧಾರ್ಮಿಕ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಪತಿಗೆ ಬೆನ್ನೆಲುಬಾಗಿ ಸ್ಪೂರ್ತಿ ತುಂಬುತ್ತಿದ್ದ ಇವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
