

ಕುಂದಾಪುರ : 14/06/2024 ದಂದು ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆ ಕುಂದಾಪುರಇಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾಕಾರ್ಯಕ್ರಮವನ್ನುಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ರವರು ವಹಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ|ಧರ್ಮಗುರು ಸಿರಿಲ್ ಲೋಬೋ ಹಾಗು ವಿದ್ಯಾರ್ಥಿ ನಾಯಕಿ ಹಾಗು ಉಪನಾಯಕ ಒಡಗೂಡಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ವಂದನೀಯ ಗುರು ಸಿರಿಲ್ ಲೋಬೋರವರು “ಈ ಜಗತ್ತಿನಲ್ಲಿಎಲ್ಲರೂಕೂಡ ಭಗವಂತನ ಸೃಷ್ಠಿ ಯಾವುದೋ ಮಹತ್ತರದ ಸಾಧನೆಗಾಗಿದೇವರು ನಮ್ಮನ್ನು ಈ ಭೂಮಿಗೆ ಕಳುಹಿಸಿದ್ದಾರೆ ಹಾಗಾಗಿ, ಕೊನೆ ಪಕ್ಷ ನಮ್ಮ ಸುತ್ತಲಿರುವವರಿಗೆ ಖುಷಿ ನೀಡುವ ಜೇನ ಹನಿಯಾಗಬೇಕು,. ದೊರಕಿರುವುದರಲ್ಲಿ ಸಂತೋಷವನ್ನುಕಾಣಬೇಕು. ಇಲ್ಲಿ ಪ್ರತಿಯೊಬ್ಬರು ಅತ್ಯಮೂಲ್ಯರು ನಾವು ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬಾರದು. ಹುಟ್ಟು ನಮ್ಮಆಯ್ಕೆ ಅಲ್ಲ ಆದರೆಜೀವನ ನಮ್ಮಆಯ್ಕೆ ಹಾಗಾಗಿ ಜೀವನದಲ್ಲಿ ಉತ್ತಮ ಆಯ್ಕೆ ನಿಮ್ಮದ್ದಾಗಿರಲಿ. ವಿದ್ಯಾರ್ಥಿಗಳು ತಪ್ಪಿಯೂಕೂಡ ಸಾಮಾಜಿಕ ಜಾಲತಾಣಗಳನ್ನು ಆರಿಸಿಕೊಳ್ಳಬೇಡಿ. ದೇವರ ಭಯವೇಜ್ಞಾನದ ಮೂಲ. ಹಾಗಾಗಿ ಜ್ಞಾನಿಗಳಾಗಿ ಅರಿವು ಬೆಳಸಿಕೊಳ್ಳಿ . ನೈತಿಕತೆ ಇಲ್ಲದ ಶಿಕ್ಷಣ ವ್ಯರ್ಥ ನಾವು ಟೈಲರ್ ನಿರ್ಮಿಸಿದ ಸಂಭಾವಿತರಾಗಬಾರದು ನಡೆತೆ ನಿರ್ಮಿಸಿದ ಸಂಭಾವಿತರು ನಾವಾಗಬೇಕು. ಅದಕ್ಕೆ ನಮಗೆ ದೇವರ ಭಯ ಮತ್ತು ಬುದ್ದಿ ವಂತಿಕೆಬೇಕು. ಹುಟ್ಟುವಾಗಲೇಯಾರು ಶ್ರೇಷ್ಠರಲ್ಲ
ಆದರೆ ಸಾಯುವಾಗ ಕನಿಷ್ಠರಾಗಬಾರದು. ಅಹಂಕಾರವಿದ್ದಲ್ಲಿ ವಿದ್ಯೆಗೆ ಸ್ಥಾನವಿರುವುದಿಲ್ಲ ಹಾಗಾಗಿ ಅಹಂಕಾರಿಗಳಾಗಬೇಡಿ ಎಂಬುವುದಾಗಿ ಸುಮಾರು 2 ಗಂಟೆಗಳ ಕಾಲ ಸುದೀರ್ಘ ಹಿತವಚನ ಹಾಗು ಕಾಕಚೇಷ್ಠ, ಬಕೋಧ್ಯಾನ, ಶ್ವಾನ ನಿದ್ರಾ, ತತ್ವೇಚಾ, ಅಲ್ಪಹಾರಿ, ಗೃಹ ತ್ಯಾಗಿ ವಿದ್ಯಾರ್ಥಿ ಪಂಚಲಕ್ಷಣಂ ಎಂಬ ಸಂಸ್ಕೃತ ಉಕ್ತಿಯೊಂದಿಗೆ ಪ್ರೋತ್ಸಾಹದಾಯಕ, ಮಾತುಗಳನ್ನಾಡಿ ಮಕ್ಕಳನ್ನು ಕಲಿಕೆಯತ್ತ ಉತ್ತೇಜಿಸಿದರು.
ವಿದ್ಯಾರ್ಥಿನಿ ಕುಮಾರಿರೋಶನಿ ದಾಸ್ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿ ವಿಘ್ನೇಶ್ಎನ್ ಪೂಜಾರಿ ಸ್ವಾಗತಿಸಿ ವಿದ್ಯಾರ್ಥಿನಿ ಪರ್ಲ್ ಅಲಿನಾ ಬರೆಟ್ಟೊ ವಂದಿಸಿದರು.











