ಆರೋಗ್ಯ ಇಲಾಖೆಯವರು ಮಾಡಬೇಕು . ಕಾಲ ಕಾಲಕ್ಕೆ ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ತಾಯಂದಿರು ಪಾಲಿಸಬೇಕು . ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಸ್ತನ್ಯಪಾನದ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸಬೇಕು . ಗರ್ಭಿಣಿಯರು ಮತ್ತು ಬಾಣಂತಿಯರು ಮನೆಯಲ್ಲಿ ದೊಡ್ಡವರು ಹೇಳುವಂತಹ ಮೂಡನಂಬಿಕೆಗಳನ್ನು ಕೈ ಬಿಡಬೇಕು ಎಂದು ತಿಳಿಸಿದರು . ಕೋಲಾರ ತಾಲ್ಲೂಕಿನ ಆರೋಗ್ಯಾಧಿಕಾರಿಗಳಾದ ಡಾ || ಎ.ವಿ.ನಾರಾಯಣಸ್ವಾಮಿ ಅವರು ಮಾತನಾಡಿ , ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸ್ತನ್ಯಪಾನ ದಿನ ಎಂದು ಹಮ್ಮಿಕೊಳ್ಳಲಾಗುತ್ತಿದೆ . ಜಂತುಹುಳ ನಿರ್ಮೂಲನೆಗಾಗಿ ಹಿಂದಿನ ಕಾಲದಿಂದಲೂ ಸಹ ಯೋಜನೆಗಳನ್ನು ರೂಪಿಸಲಾಗುತ್ತಿದೆ . ಜಂತುಹುಳ ನಿರ್ಮೂಲನೆಗಾಗಿ ಅಲ್‌ಬೆಂಡೂ ಜೋಲ್ ಮಾತ್ರೆಗಳನ್ನು ನೀಡಬೇಕು . 1-2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಮಕ್ಕಳಿಗೆ ಕುಡಿಸಬೇಕು . 2-19 ವರ್ಷದ ಮಕ್ಕಳಿಗೆ ಒಂದು ಮಾತ್ರೆ ಅಗಿಯಲು , ಚಪ್ಪರಿಸಲು ಆಗದಿರುವರಿಗೂ ಸಹ ಪುಡಿ ಮಾಡಿ ನೀರಿನಲ್ಲಿ ನೀಡಬೇಕು . ಶಾಲೆ ಮತ್ತು ಅಂಗನವಾಡಿಗಳ ವ್ಯಾಪ್ತಿಗೆ ಬರುವ ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಮಾಡಿ ಅವರಿಗೂ ಸಹ ನೀಡಬೇಕು ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ರಮೇಶ್ , ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ , ಎಲ್ಲಾ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .