ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುವಲ್ಲಿ ದಾದಿಯರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ ವಸ್ತುಗಳನ್ನು ಹೊರ ಹಾಕಿ ಕೋಠಡಿಗಳನ್ನು ಸ್ವಚ್ಚಮಾಡುವಂತ ದಾದಿಯರು ಮಾತೃ ಸ್ವರೂಪಿಗಳು ನಿಷ್ಕಳಂಕರಾಗಿ ರೋಗಿಗಳ ಆರೈಕೆಯಲ್ಲಿ ತೊಡಗುವ ಅವರ ಸೇವೆ ಅನನ್ಯ ಎಂದು ಎಸ್.ಎಸ್.ವಿ.ಎಸ್ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಹೇಳಿದರು ಅವರು ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯರು ಎಸ್.ಎಸ್.ವಿ.ಎಸ್ ಟ್ರಸ್ಟ್ ಸಹಯೋಗದೊಂದಿಗೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ “ಡಿ” ಗ್ರೂಪ್ ನೌಕರರಾಗಿ ದುಡಿಯುತ್ತಿರುವ ಸುಮಾರು ಇಪ್ಪತ್ತೇಂಟು ಮಂದಿ ನೌಕರರಿಗೆ ಗೌರವನಗದು ನೀಡಿ ಗೌರವಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ಆಸ್ಪತ್ರೆಯ “ಡಿ” ಗ್ರೂಪ್ ನೌಕರರು ದಾದಿಯರ ಸೇವೆ ಗುರುತಿಸಿ ಅವರನ್ನು ಗೌರವಿಸಿರುವಂತ ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯರ ನಡೆ ನಿಜಕ್ಕೂ ಶ್ಲಾಘನೀಯ ಇದೊಂದು ಮಾದರಿ ತಿರ್ಮಾನ ಎಂದರು.
ಕೋವಿಡ್ ರೋಗಿಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಡಾ.ಉಮಾಶಂಕರ್,ಡಾ.ಶ್ರೀನಿವಾಸ್ ಹಾಗು ಶುಶ್ರುಶಾ ಅಧಿಕಾರಿ ಶ್ರಿಮತಿ ಲಿಡಿಯಾ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮ್ಯಾಂಗೋ ಫಾರಮರ್ಸ್ ಸಂಸ್ಥೆಯ ಕಾರ್ಯನಿರ್ವಣಾಧಿಕಾರಿ ಶಿವಕುಮಾರ್,ನಿರ್ದೇಶಕ ರಮೇಶಬಾಬು,ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯ ವಾಸವಿರಾಮು,ಕೆ.ವಿ.ಸಿ.ರೆಡ್ಡಿ ಇದ್ದರು
ಸುದ್ದಿಗೆ ಸಂಬಂದಿಸಿದ ಫೋಟೋ 23062021.1 ಅಂಕಣದಲ್ಲಿ ಕಳಿಸಿದೆ