ಅಪೌಷ್ಟಿಕತೆಯಿಂದ ಮಕ್ಕಳನ್ನು ಕಾಪಾಡಲು ತಾಯಂದಿರಿಗೆ ಅರಿವು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಕೋಲಾರ ತಾಲ್ಲೂಕಿನ ಹೂಹಳ್ಳಿ ಗ್ರಾಮದಲ್ಲಿ ಯಂಗ್ ಇಂಡಿಯಾ ಡೆವಲಪ್ಟೆಂಟ್ ಸೊಸೈಟಿ , ಗ್ರಾಮವಿಕಾಸ ಸಹಯೋಗದೊಂದಿಗೆ ಮತ್ತು ರೋಟರಿ ಕ್ಲಬ್ , ಕೋಲಾರ ಲೈಕ್ ಸೈಡ್ , ಸಿ.ಎಂ.ಸಿ.ಎ ವತಿಯಿಂದ ಗ್ರಾಮದ ಮಕ್ಕಳಿಗೆ ಎಂ.ಟಿ.ಆರ್ . ಉಪ್ಪಿಟ್ಟು ಮತ್ತು ಬಿಸಿ ಬೆಳೆಬಾತು ಪುಡ್ ಪ್ಯಾಕೆಟ್‌ಗಳನ್ನು ಅಂಗನವಾಡಿಗೆ ದಾಖಲಾಗಿರುವ ಮಕ್ಕಳಿಗೆ ನೀಡಿ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಕೊರೊನಾ ಮೂರನೆ ಅಲೆ ತಡೆಯಲು ಮಕ್ಕಳು ನಗುತ್ತಿರಲಿ ಎಂಬ ಪುಸ್ತಕವನ್ನು ನೀಡವ ಮೂಲಕ ಮಕ್ಕಳು ಅವರ ತಾಯಂದಿರಿಗೆ ಪೌಷ್ಟಿಕ ಆಹಾರ ಮತ್ತು ಮಕ್ಕಳ ಹಕ್ಕುಗಳ , ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಸಿ ಕೋರೋನಾದ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದರಿಂದ ಮಕ್ಕಳನ್ನು ಸುರಕ್ಷತೆಯಿಂದ ನೋಡಿಕೊಳ್ಳಬೇಕು ಮತ್ತು ಸೊಪ್ಪು , ತರಕಾರಿ , ಮೊಟ್ಟೆ , ಹಾಲು ಅಂತಹ ಪೌಷ್ಟಿಕ ಆಹಾರವನ್ನು ಕೊಡಬೇಕು ಮತ್ತು ಸುರಕ್ಷತೆಗೆ ಗಮನ ಕೊಡಬೇಕು , ಬಾಣಂತಿಗಳ ಆರೋಗ್ಯ ಮತ್ತು ಆಹಾರ ಪದ್ದತಿ ಕಡೆ ಗಮನ ಹರಿಸಿ ಅಪೌಷ್ಟಿಕತೆಯಿಂದ ಒರಬರಬೇಕೆಂದು ಮತ್ತು ಇಂಡಿಯಾ ಡೆವಲಪ್ಟೆಂಟ್ ಸೊಸೈಟಿಯು ಆರಹಳ್ಳಿ ಗ್ರಾಮಪಂಚಾಯಿತಿಯನ್ನು ಮಕ್ಕಳ ಸ್ನೇಹಿ ಗ್ರಾಮಪಂಚಾಯಿತಿಯಾಗಿ ಮಾಡುತ್ತೇವೆ ಎಲ್ಲಾ ಗ್ರಾಮದ ಮಕ್ಕಳ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹೂಹಳ್ಳಿ ನಾಗರಾಜ್ ತಿಳಿಸಿದರು.ಈ ಸಭೆಯಲ್ಲಿ ಮಕ್ಕಳ ಕ್ಲಬ್ ಸದಸ್ಯರು , ಮಹಿಳ ಸಂಘದ ಪ್ರತಿನಿಧಿಗಳುತಾರುಂದಿರು ಭಾಗವಹಿಸಿದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ