ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾಸ್ ಪಿ ಯು ಕಾಲೇಜಿನ ಪ್ರಥಮ ಪಿ ಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಮನ್ವಂತರ -2025 ಕಾಲೇಜು ಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು ಶಿಕ್ಷಣದೊಂದಿಗೆ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಸಂಸ್ಥೆಯು ನೂತನವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಮತ್ತು ಆಧುನಿಕತೆ ಹಾಗೂ ವ್ಯವಾಹಾರಿಕ ಜ್ಞಾನವನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವ ಉದ್ದೇಶವೇ ಮನ್ವಂತರ -2025.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕರುಣಾಕರ ಶೆಟ್ಟಿ (ಉಪಪ್ರಾಂಶುಪಾಲರು ಕೆ ಪಿ ಎಸ್ ಬಿದ್ಕಲಕಟ್ಟೆ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಇತರರಿಗೆ ಮಾದರಿಯಾಗಬೇಕು ಈ ದಿಶೇಯತ್ತ ಬುನಾದಿ ತರಬೇತಿಯನ್ನು ನೀಡಿ ಸಮಾಜದಲ್ಲಿ ಗುರುತರ ಕಾರ್ಯವನ್ನು ಮಾಡುತ್ತಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕೊಡುಗೆ ನಿಜಕ್ಕೂ ಶ್ಲಾಘನೀಯ
ಈಗಾಗಲೇ ಹತ್ತು ಹಲವು ಪಾಟೇತರ ಚಟುವಟಿಕೆಯಿಂದ ಮನೆಮಾತಾಗಿರುವ ಸಂಸ್ಥೆಯ ಹೆಸರು ಇನ್ನೂ ಎತ್ತರಕ್ಕೆ ಕೊಂಡೋಯ್ಯಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು
ಇನ್ನೊರ್ವ ಅತಿಥಿಗಳಾದ ರಾಘವೇಂದ್ರ ಚಾತ್ರಮಕ್ಕಿ (ಬಹುಮುಖ ಕಲಾವಿದರು ಮತ್ತು ಚಿತ್ರಕಲಾ ಶಿಕ್ಷಕರು ಜಿ ಎಚ್ ಎಸ್, ಸಿದ್ದಾಪುರ ) ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಪ್ರತಿಭೆ ಪ್ರದರ್ಶಿಸಲು ಅತ್ತ್ಯುತ್ತಮ ವೇದಿಕೆ ಹಾಗೂ ಆಡಳಿತಮಂಡಳಿ ಕಾರ್ಯ ಚಟುವಟಿಕೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು
ಶ್ರೀ ಕರುಣಾಕರ ಶೆಟ್ಟಿ, ಶ್ರೀ ರಾಘವೇಂದ್ರ ಚಾತ್ರಮಕ್ಕಿ, ಶ್ರೀ ಉದಯಕುಮಾರ, ಡಾ. ರವಿದಾಸ್ ಶೆಟ್ಟಿ, ಕುಮಾರಿ ಅಲಿಟಾ ಡೇಸ್ ಮತ್ತು ಶ್ರೀ ಜಗದೀಶ್ ಬನ್ನಂಜೆ ನಿರ್ಣಾಯಕರಾಗಿ
ಕಾರ್ಯನಿರ್ವಹಿಸಿದರು
ಮನ್ವಂತರ -2025 ರ ನೂತನ ಕಾರ್ಯಕ್ರಮದಲ್ಲಿ ಎಂಟು ತಂಡಗಳು ಕ್ರಮವಾಗಿ
1.ನವಚೇತನ
2.ವೈಶಿಷ್ಟ್ಯ
3.ಶಕ್ತಿ
4.ಸಮೃದ್ಧಿ
5.ಅಭ್ಯೂದಯ
6.ಸಮರಸಂಗಮ
7.ಹಯಗ್ರೀವ
8.ನವತಾರಾ
ಭಾಗವಹಿಸಿ ಹತ್ತು ಹಲವು ವಿವಿಧ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು
ಆಡಳಿತ ಮಂಡಳಿಯ ಅಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್, ಮತ್ತು ಕುಮಾರಿ ರೆನಿಟಾ ಲೋಬೊ, ಕುಮಾರಿ ಗೀತಾ (ವಾಣಿಜ್ಯ ವಿಭಾಗದ ಮುಖ್ಯಸ್ಥೆ ) ಉಪನ್ಯಾಸಕರು, ಶಿಕ್ಷಕರು ಪ್ರಾಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು
ಮಿಗುತ್ತಿರುವ ಚಾಂಪಿಯನ್ ಟ್ರೋಫಿ ನವಚೇತನ ಮತ್ತು ಸಮರಸಂಗಮ ತಂಡಗಳು ಜಂಟಿಯಾಗಿ ಸ್ವೀಕರಿಸಿದರು, ರನ್ನರ್ಸ್ ಅಪ್ “ಶಕ್ತಿ” ತಂಡದ ಮುಡಿಗೇರಿತು ಇತ್ತಂಡಗಳು ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದರು
ಉಪನ್ಯಾಸಕಿ ಶಾಂತಿ ತಾಂತ್ರಿಕ ಸಲಹೆಗಾರರಾಗಿ ಸಹಕರಿಸಿದರು
ಉಪನ್ಯಾಸಕರಾದ ಉದಯ್ ಸ್ವಾಗತಿಸಿ, ರಸಿಕ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.