ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಶೇಖ್ ಎಮ್ ನಿಹಾನ್ (3ನೇ ತರಗತಿ) ಗ್ರೀಷ್ಮಾ (4ನೇ ತರಗತಿ) ಮತ್ತು ಸಿಂಧು ಮಧ್ಯಸ್ತ (6ನೇ ತರಗತಿ) ಮಹಾರಾಷ್ಟ್ರದ ಪುಣೆಯಲ್ಲಿ ಗುರು ಅಬಾಕಸ್ ಮತ್ತು ವೇದಿಕ್ ಮಾತೆಮಾಟಿಕ್ಸ್ ಆಯೋಜಿಸಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿರುತ್ತಾರೆ ಹಾಗೂ ಮಾರ್ಗದರ್ಶನ ನೀಡಿದ ರಾಷ್ಟ್ರಮಟ್ಟದ ಸಂಪನ್ಮೂಲ ತರಬೇತುದಾರರು ಹಾಗೂ ಅಬಾಕಸ್ ಮತ್ತು ವೇದಿಕ್ ಮಾತೆಮಾಟಿಕ್ಸ್ ಉಪನ್ಯಾಸಕರಾದ ಗೀತಾ ಇವರು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನಾರಾಗಿರುತ್ತಾರೆ
ಇವರಿಗೆ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭಾಷಯ
ಕೋರಿರುತ್ತಾರೆ.