

ಕುಂದಾಪುರ: ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾಗಿ ಮತ್ತು ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯ ಸಂಯೋಜಕರಾಗಿ 26 ವರ್ಷಗಳ ಸುದೀರ್ಘ ಸೇವಾ ಅನುಭವದ ಶ್ರೀಮತಿ ನಿರ್ಮಲ ಕುಮಾರಿ. ಬಿ ಆಯ್ಕೆ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ. ಈ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಕ್ರಾಂತಿಯನ್ನುಂಟು ಮಾಡಿ ದಾಪುಗಾಲು ಇಡುತ್ತಾ ಮುಂದೆ ಸಾಗುತ್ತಿದೆ. ಇದಕ್ಕೆ ಗರಿಮೆ ಎಂಬಂತೆ ಶ್ರೀಮತಿ.ನಿರ್ಮಲಾ ಕುಮಾರಿ.ಬಿ ಗಣಿತ ವಿಭಾಗದ ಮುಖ್ಯಸ್ಥರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳ ಸಂಯೋಜಕರಾಗಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ನಿಯುಕ್ತರಾಗಿರುತ್ತಾರೆ.
ಇವರು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಗಣಿತ ವಿಭಾಗದ ಮುಖ್ಯಸ್ಥರಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳ ಸಂಯೋಜಕರಾಗಿ ಸುದೀರ್ಘ 23 ವರ್ಷಗಳ ಸೇವಾ ಅನುಭವವನ್ನು ಹೊಂದಿರುತ್ತಾರೆ. ಅದರೊಂದಿಗೆ ಮಂಗಳೂರಿನ ಬೋಸ್ಕೋಸ್ ಕಾಲೇಜಿನಲ್ಲಿಯೂ ಸಹ ಇದೇ ಕಾಯಕದ 3 ವರ್ಷದ ಸೇವಾ ಅನುಭವ ಹೊಂದಿರುತ್ತಾರೆ.
ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದು ಗಣಿತದ ಸಾಧನೆಗಾಗಿ ಹತ್ತು ಹಲವು ಪುರಸ್ಕಾರಗಳನ್ನ ಪಡೆದಿರುವ ಇವರು ಈ ಶೈಕ್ಷಣಿಕ ವರ್ಷದ ಗಣಿತ ವಿಷಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಜವಾಬ್ದಾರಿಯನ್ನು ಹೆಗಲಗೇರಿಸಿಕೊಂಡು ಉತ್ತಮ ಫಲಿತಾಂಶವನ್ನು ನೀಡುವ ಭರವಸೆಯೊಂದಿಗೆ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಇವರಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ಪಾಲಕರು ಶುಭ ಹಾರೈಸಿದ್ದಾರೆ.