![](https://jananudi.com/wp-content/uploads/2024/06/000000-JANANUDI-6.png)
![](https://jananudi.com/wp-content/uploads/2024/06/ಜಾಹಿರಾತು.jpg)
![](https://jananudi.com/wp-content/uploads/2024/06/೧-2.jpg)
ಕುಂದಾಪುರ :ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಯೋಗ ಶಿಕ್ಷಣವನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಇಂದು ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಅದರ ಉದ್ಘಾಟನೆಯನ್ನು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸಂಯೋಜಕರಾದ ಉಮೇಶ ಶೆಟ್ಟಿ,ಅವಿನಾ,ದಿವ್ಯಾ ಪೂಜಾರಿ ಮತ್ತು ಕುಸುಮಾ ಶೆಟ್ಟಿ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ನೀಡುವುದರ ಮೂಲಕ ಉದ್ಘಾಟಿಸಿದರು ಎಲ್ ಕೆ ಜಿ ಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಹೊಸ ಯೋಗಸಮವಸ್ತ್ರದೊಂದಿಗೆ ಸಂಭ್ರಮದಿಂದ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರು
ಯೋಗ ಶಿಕ್ಷಕ ರತ್ನಕುಮಾರ್ ಯೋಗದ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಕೊಳುವಂತೆ ಮಾಹಿತಿ ನೀಡಿದರು
ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ವರ್ಗದವರು ಯೋಗಾಸನವನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆಯನ್ನು ನೀಡಿದರು.
![](https://jananudi.com/wp-content/uploads/2024/06/೨-1.jpg)
![](https://jananudi.com/wp-content/uploads/2024/06/೩-3.jpg)
![](https://jananudi.com/wp-content/uploads/2024/06/೪-1.jpg)
![](https://jananudi.com/wp-content/uploads/2024/06/೫-1.jpg)
![](https://jananudi.com/wp-content/uploads/2024/06/೬-1.jpg)
![](https://jananudi.com/wp-content/uploads/2024/06/೭-1.jpg)