ಶಂಕರನಾರಾಯಣ : ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ಉದ್ದೇಶದಿಂದ ಶೈಕ್ಷಣಿಕ ವರ್ಷದ ದ್ವಿತೀಯ ಸೆಮಿಸ್ಟರ್
ಅವಧಿಯಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹುಡುಗ ಮತ್ತು ಹುಡುಗಿಯರಿಗೆ ನಾಲ್ಕು ತಂಡಗಳನ್ನಾಗಿ (ಎಮರಾಲ್ಡ್, ಸಪಾಯರ್, ರೂಬಿ ಮತ್ತು ಟೋಪಾಜ್ ) ರಚಿಸಿ ಅಕ್ಟೋಬರ್ ತಿಂಗಳ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ವಿವಿಧ ರೀತಿಯ ಒಳಾOಗಣ ಮತ್ತು ಹೊರಾಂಗಣ ಕ್ರೀಡೆ,ಸಾಂಸ್ಕೃತಿಕ
ಸಹಪಠ್ಯಚಟುವಟಿಕೆ ಮತ್ತು ಶಿಸ್ತು ಇತ್ಯಾದಿ ವಿಭಾಗಗಳಲ್ಲಿ ತೋರಿದ ಸರ್ವಾ0ಗೀಣ ಪ್ರಗತಿಯನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಠಿತ ವಿಕ್ಟರ ಅವಾರ್ಡ್ ಪ್ರಶಸ್ತಿಯನ್ನು ವರ್ಷದ
ದ್ವಿತೀಯಾರ್ಧದಲ್ಲೂ ಸಹ ಸಪಾಯರ್ ತಂಡ ತನ್ನ ಮಡಿಗೇರಿಸಿಕೊಂಡಿತು ಅಪರಾಹ್ನ ನಾಲ್ಕು ತಂಡದ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಜಿದ್ದಾಜಿದ್ದಿನಿಂದ ಕೂಡಿದ ಹಗ್ಗಜಗ್ಗಾಟ, ರಿಲೇ ಸ್ಪರ್ಧೆಯಲ್ಲಿ ಎಲ್ಲಾ ತಂಡದ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಮಿನುಗುತ್ತಿರುವ ಆಕರ್ಷಕ ರಜತ ಟ್ರೋಫಿಯನ್ನು ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರ ಸಮ್ಮುಖದಲ್ಲಿ ಸಪಾಯರ್ ತಂಡದ ನಾಯಕ ಪ್ರಜ್ವಲ್ ಶೆಟ್ಟಿ ಮತ್ತು ನಾಯಕಿ ಅನಿಷಾ ಶೆಟ್ಟಿ ತಂಡದ ಸದಸ್ಯರೊಂದಿಗೆ
ಸಂಸ್ಥೆಯ
ಆಡಳಿತಾಧಿಕಾರಿಧ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ ಇವರಿಂದ ಸ್ವೀಕರಿಸಿ ಹರ್ಷೋದ್ಘಾರದೊಂದಿಗೆ ಕುಣಿದು ಕುಪ್ಪಳಿಸಿದರು. ಮದರ್ ತೆರೇಸಾ ಕುಟುಂಬದ ಎಲ್ಲಾ ಸದಸ್ಯರು
ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿ ಹಬ್ಬದ ವಾತಾವರಣವನ್ನು ನಿರ್ಮಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ತಂಪುಪಾನೀಯ ಮತ್ತು ಸಿಹಿ ವಿತರಿಸಲಾಯಿತು.