

ಕುಂದಾಪುರ : ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣ 2024-25ನೇ ಶೈಕ್ಷಣಿಕ ಸಾಲಿನ ದಾಖಲಾತಿಯಲ್ಲಿ ಎಲ್ ಕೆ ಜಿ ಯಿಂದ ಪಿ ಯು ಸಿ ವರೆಗಿನ ವಿದ್ಯಾರ್ಥಿಗಳ ಸಂಖ್ಯೆ
ಹೆಚ್ಚಳವಾಗಿರುವುದರಿಂದ ಸಿದ್ದಾಪುರ ಊರಿನ ಮಕ್ಕಳಿಗಾಗಿ ಬೇರೆ ವಾಹನ ವ್ಯವಸ್ಥೆ ಮಾಡಲಾಗಿದೆ
ಕಂಡ್ಲುರು,ಗುಂಹೊಲ, ಬೇಳೂರು ಹಾಗೂ ಕೋಟೇಶ್ವರ ಈ ಮಾರ್ಗಗಳಿಗೆ ಹೊಸದಾಗಿ ವಾಹನ ಸೌಲಭ್ಯ ಒದಗಿಸಲು ಆಡಳಿತಮಂಡಳಿ 4 ಹೊಸ ಬಸ್ಸುಗಳನ್ನು ಅಮರಜ್ಯೋತಿ ಆಟೋಮೋಬೈಲ್ಸ್ ಪಡೀಲ್ ಮಂಗಳೂರು ವಿತರಕರಿಂದ ಖರೀದಿಸಿದೆ ಜನರಲ್ ಮ್ಯಾನೇಜರ್ ರಾನ್ಸನ್ ಮಚಾಡೊ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ನ ಆಡಳಿತ ಅಧಿಕಾರಿಗಳಾದ ಕುಮಾರಿ ರೆನಿಟಾ ಲೋಬೊ ಮತ್ತು ಕುಮಾರಿ ಶಮಿತಾ ರಾವ್ ಇವರಿಗೆ ಕೀ ಮತ್ತು ಹೂಗುಚ್ಚ ನೀಡಿ ವಾಹನ ಹಸ್ತಾಂತರಿಸಿ ಸಂಸ್ಥೆಗೆ ಶುಭಕೋರಿರುತ್ತಾರೆ ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಆಡಳಿತ ಮಂಡಳಿಯ ಕೊಡುಗೆ ಶ್ಲಾಘನಿಯ ಪ್ರತಿ ಶಾಲಾ ವಾಹನಗಳಲ್ಲಿ ನುರಿತ ವಾಹನ ಚಾಲಕರು ಮತ್ತು ಮಹಿಳಾ ಸೇವಾ ಸಿಬ್ಬಂದಿಗಳ ನೇಮಕಾತಿ ಮಾಡಿರುತ್ತೇವೆ ಆದ್ದರಿಂದ ಪಾಲಕ /ಪೋಷಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

