JANANUDI.COM NETWORK
ಕುಂದಾಪುರ,ನ.28: “ಈ ಇಗರ್ಜಿಗೆ 451 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 451 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ಯೇಸುವಿನ ತಾಯಿ ಮೇರಿ ಮಾತೆಯು ಇಲ್ಲಿ ರೋಜರಿ ಮಾತಾ ಹೆಸರಿನಲ್ಲಿ ಕ್ರಪಾಪೂರ್ಣೆಯಾಗಿದ್ದಳೆ. ಅವಳ ದಯೆ ಈ ಇಗರ್ಜಿಯ ಮೇಲೆ ಇದೆ, ಪ್ರಸಾದ ಪೂರ್ಣೆ ಮಾತೆ ಮರಿಯಳು ಕ್ರಪಾ ಭರಿತ ಜೀವನಕ್ಕೆ ಪ್ರೇರಣೆಯಾಗಿದ್ದಾಳೆ. ಹಾಗೆಯೇ ಈ ಇಗರ್ಜಿಯಲ್ಲಿ ಸೇವೆ ನೀಡಿದ ಧರ್ಮಗುರು ಸಂತ ಜೋಸೆಫ್ ವಾಜ್‍ರವರು ಸಂತ ಪದವಿ ಗಳಿಸಿದ್ದು, ಇದೊಂದು ಪುಣ್ಯ ಭೂಮಿಯಾಗಿದೆ. ಯೇಸು ಕ್ರಿಸ್ತರನ್ನು ನಮ್ಮ ಜೀವನದ ಆದ್ಯತೆ ನೀಡಿದರೆ ನಮ್ಮ ಜೀವನವು ಪರಿಪೂರ್ಣಗೊಳ್ಳುವುದು” ಎಂದು ಹಿಂದೆ ಕುಂದಾಪುರದಲ್ಲಿ ಸಂತ ಮೇರಿಸ್ ಪ್..ಯು.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ, ಈಗ ಅಜೆಕಾರ್ ಚರ್ಚಿನ ಧರ್ಮಗುರುಗಳು, ಹಾಗೇ ಚರ್ಚಿನ ಪಿ,ಯು. ಕಾಲೇಜಿನ ಪ್ರಾಂಶುಪಾಲರಾದ ವಂ|ಫಪ್ರವೀಣ್ ಅಮ್ರತ್ ಮಾರ್ಟಿಸ್ ಸಂದೇಶ ನೀಡಿದರು..
ಅವರು 451 ವರ್ಷಗಳ ಹಿರಿಮೆಯುಳ್ಳ ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ದೇವಾಲಯದ ನ. 24 ರಂದು ನಡೆದ ವಾರ್ಷಿಕ ಮಹಾ ಹಬ್ಬದ ಸಂಭ್ರಮದ ದಿವ್ಯ ಬಲಿ ಪೂಜೆಯ ನೇತ್ರತ್ವವನ್ನು ವಹಿಸಿಕೊಂಡು “ಮೇರಿ ಮಾತೆಯ ಜೀವನ ಯೇಸು ಕ್ರಿಸ್ತರ ಪ್ರೇರಣೆಯಿಂದ ಕೂಡಿದಾಗಿತ್ತು ಮಾತೆ ಮರಿಯಳು ದೇವರ ಮಹಿಮೆಗೆ ಒಳ ಪಟ್ಟಿದ್ದಳೆಂದು ಬೈಬಲನಲ್ಲಿ ವ್ಯಾಖನ್ನಿಸಿದೆ. ಹಾಗಾಗಿ ಮಾತೆಯ ಪ್ರೇರಣೆಯಿಂದ ನಾವು ನವ ಜೀವನವನ್ನು ರೂಪಿಸಿ ಕೊಳ್ಳೋಣ” ಎಂದು ಹೇಳಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು. ವಲಯದ ಹೆಚ್ಚಿನ ಎಲ್ಲ ಇಗರ್ಜಿಗಳ ಧರ್ಮಗುರುಗಳು, ಕುಂದಾಪುರದ ಸಹಾಯಕ ಧರ್ಮಗುರುಗಳು ಪವಿತ್ರ ಬಲಿದಾನದಲ್ಲಿ ಭಾಗಿಯಾಗಿದ್ದರು. ಕಟ್ಕರೆ ಬಾಲಾ ಯೇಸುವಿನ ಸುಪೀರಿಯರ್ ಧರ್ಮಗುರು ವಂ|ಆಲ್ವಿನ್ ಸಿಕ್ವೇರಾ ಗಾಯನ ಮಂಡಳಿಗೆ ನಿರ್ದೇಶನ ನೀಡಿದರು. ಹಬ್ಬದ ಪೋಷಕರಾದ ಜೋನ್ ಡಿಸೋಜಾ, ಫೆಲ್ಸಿಯಾನ್ ಡಿಸೋಜಾ, ಸನ್ನಿ ಡಿಸೋಜಾ ಉಪಸ್ಥಿತರಿದ್ದರು.