ಕೋಟ ಸಂತ ಜೊಸೇಫ್ ಚರ್ಚಿನಲ್ಲಿ ಮೇರಿ ಮಾತೆಯ ಜನ್ಮ ದಿನ – ತೇನೆ ಹಬ್ಬವನ್ನು ಮೇರಿ ಮಾತೆಯ ಜನ್ಮ ದಿನ ಸೆ.೮ ರಂದು ಭಕ್ತಿ ಪೂರ್ವಕವಾಗಿ ಆಚರಿಸಲಯಿತು.
ಈ ಆಚರಣೆಗೆಗಾಗಿ ಮುಖ್ಯ ಅತಿಥಿಗಳಾಗಿ ಧರ್ಮಗುರು ವಂ।ಆಶ್ವಿನ್ ಆರಾನ್ನ ಆಗಮಿಸಿ ಕನ್ಯಾ ಮರಿಯಮ್ಮನ ಜನ್ಮ ದಿನದ ಬಲಿ ಪೂಜೆಯಲ್ಲಿ ಭಾಗವಹಿಸಿದರು. ಜೊತೆಗೆ ಕೋಟ ಚರ್ಚಿನ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಬಲಿಪೂಜೆಯನ್ನು ಅರ್ಪಿಸಿದರು. ಬಲಿದಾನಕ್ಕೂ ಮೊದಲು ಹೊಸ ಬತ್ತದ ತೇನೆಗಳನ್ನು ಆಶಿರ್ವದಿಸಲಾಯಿತು.
ಮಕ್ಕಳು ಶಿಶು ಮೇರಿ ಮಾತೆಯ ಪುಥಳಿಗೆ ಪುಷ್ಪಗಳನ್ನು ಅರ್ಪಿಸಿ ಗೌರವಿಸಿದರು. ಚರ್ಚಿನ ಭಾಂದವರಿಗೆ, ಆಶಿರ್ವದಿಸಲಾದ ತೇನೆಗಳನ್ನು ಹಂಚಲಾಯಿತು. ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ವಂದಿಸಿ ಹಬ್ಬದ ಶುಭಾಶಯಗಳನ್ನು ನೀಡಿದರು.