ಕೋಟೇಶ್ವರ:ಸಾಧನೆ ಮಾಡಿದ ಹೆಚ್ಚಿನವರು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು.ಇಲ್ಲಿ ಅನೇಕ ಸೌಲಭ್ಯಗಳಿಂದು ಅದನ್ನು ಪೋಷಕರು ಸರಿಯಾಗಿ ಬಳಸಿಕೊಳ್ಳಬೇಕು. ಸರಕಾರಿ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರು ಕೆಲಸ ಮಾಡುತ್ತಿದ್ದು, ಅವರು ವಿದ್ಯಾರ್ಥಿಗಳನ್ನು ಚೆನ್ನಾಗಿ ರೂಪಿಸಬಲ್ಲ ಶಕ್ತಿ ಉಳ್ಳವರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶುಕ್ರವಾರ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಂಭ್ರಮ ‘ಪರಿಕ್ರಮ-2024’ರಲ್ಲಿ ಶಾಲೆಗೆ ನೀಡಲಾದ ವಾಹನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ಗಾಣಿಗ ಗಣರಾಜ್ಯದ ಧ್ವಜಾರೋಹಣವನ್ನು ಮಾಡಿದರು. ಅಮೃತ ಮಹೋತ್ಸವದ ನೆನಪಿಗಾಗಿ ಶಾಲೆಗೆ ನೀಡುವ ಶಾಲಾ ವಾಹನದ ಮೆರವಣಿಗೆಗೆ ಖ್ಯಾತ ಅರಿವಳಿಕೆ ತಜ್ಞ ಡಾ.ಶೇಖರ್ ಚಾಲನೆ ನೀಡಿದರು. ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ್ ನೆರವೇರಿಸಿದರು.ಅಮೃತ ಮಹೋತ್ಸವದ ಶಾಶ್ವತ ನಾಮಫಲಕವನ್ನು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್ ಅನಾವರಣಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು.
ಕುಂದಾಪುರದ ಬಿಇಓ ಶೋಭಾ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಗುಲಾಬಿಯಮ್ಮ, ಸುಮತಿ ನಾಗರಾಜ, ಚಂದ್ರ ಬಿ.ಎನ್, ಶೇಖರ ಛಾತ್ರಬೆಟ್ಟು, ಮಂಜುನಾಥ ಕುಂದರ್, ಅನಿಲ ಛಾತ್ರಬೆಟ್ಟು, ಪ್ರಸನ್ನ ದೇವಾಡಿಗ, ಪುಟ್ಟು, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾೈಕ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಐಇಆರ್ಟಿ ಶಂಕರ್ ಕುಲಾಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ತೋಳಾರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್ಕುಮಾರ್ ಬಿ.ಆರ್.,ಕಾರ್ಯದರ್ಶಿ ರಾಘವೇಂದ್ರ ಅಮೀನ್,ವಿದ್ಯಾರ್ಥಿ ನಾಯಕ ಮಾ.ಪ್ರೀತಮ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಪ್ರವೀಣಾ ಶೆಟ್ಟಿ ಸ್ವಾಗತಿಸಿದರು.ಶಾಲಾ ಶಿಕ್ಷಕಿಯರಾದ ಮಂಜುಳಾ, ಅಶ್ವಿನಿ, ಸುಚಿತ್ರಾ, ಚೈತ್ರ, ಪ್ರೇಮಾ, ಸುಮಾನ ಬಹುಮಾನಿತರ ಪಟ್ಟಿ ವಾಚಿಸಿದರು. ಹಳೆ ವಿದ್ಯಾರ್ಥಿ ಚಂದ್ರಶೇಖರ ಬೀಜಾಡಿ ವಂದಿಸಿದರು.ಅಕ್ಷತ್ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.