

ಕುಂದಾಪುರ: ಅಗಸ್ಟ್ 24: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ ಪ್ರಥಮ
ಪದವಿ ವರ್ಷದ ವಿದ್ಯಾರ್ಥಿಗಳ “ದೀಕ್ಷಾರಂಭ” ಕಾರ್ಯಕ್ರಮದ ಅಂಗವಾಗಿ “ಪೃಥ್ವಿ ವಿಷನ್” ಸಂಸ್ಥಾಪಕರು, ಹಾಗೂ ಸೈಬರ್
ಭದ್ರತಾ ಸಲಹೆಗಾರರಾದ ಶ್ರೀಯುತ ಪೃಥ್ವೀಶ್ ಕೆ. ಯವರ ನೇತೃತ್ವದಲ್ಲಿ “ಸೈಬರ್ ಭದ್ರತೆ”ಯ ಕುರಿತು ಕಾರ್ಯಗಾರವು
ನೆರವೇರಿತು.
ವಿದ್ಯಾರ್ಥಿಗಳಿಗೆ ಸೈಬರ್ ಭದ್ರತೆಯಲ್ಲಿನ ಜ್ಞಾನವನ್ನು ಸಶಕ್ತಗೊಳಿಸುವತ್ತ ಗಮನಹರಿಸುವ ಮತ್ತು ಅಪರಾಧ, ಡೇಟಾ ಮತ್ತು
ಹಣಕಾಸಿನ ವಂಚನೆಗಳ ವಿರುದ್ಧ ವೈಯಕ್ತಿಕವಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದರ ಕುರಿತು ಕಾರ್ಯಗಾರದಲ್ಲಿ ವಿವರವಾಗಿ
ತಿಳಿಸಿದರು.
