ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ನಾಲಜಿಯಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಸ್ಪರ್ಧಾಕೂಟ ವಿಜೃಂಭಣೆ ಯಿಂದ ಉದ್ಘಾಟನೆಗೊಂಡಿತು. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಕಾರ್ಯಕ್ರಮದ ಲಾಂಛನವನ್ನು ಅನಾವರಣಗೊಳಿಸಿ ಫೆಸ್ಟ್ಗೆ ಚಾಲನೆ ನೀಡಿದರು. ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಸಂಯೋಜಕ ಪ್ರೊ.ವರುಣ್ ಕುಮಾರ್, ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಮನೋಜ್ ಶೆಟ್ಟಿ, ಉಪಾಧ್ಯಕ್ಷೆ ಪನ್ನಗಾ ಶೆಟ್ಟಿ, ವಿದ್ಯಾರ್ಥಿ ಕಾರ್ಯಕ್ರಮದ ಸಂಯೋಜಕ ಶ್ರೀ ಅನೀಶ್. ಪುತ್ರನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 30ಕ್ಕೂ ಹೆಚ್ಚು ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ವಿವಿಧ ಟೆಕ್ನೋ-ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರೋಮಾಂಚನಕಾರಿ ಕಾರ್ ಎಕ್ಸ್ಪೋ ಕೂಡ ಪ್ರಾರಂಭವಾಯಿತು. ಹಾಗೆಯೇ ಬೈಕ್ ಸ್ಟಂಟ್ ಮಾಸ್ಟರ್ ಗಳು ಎಲ್ಲರನ್ನು ರಂಜಿಸಿದರು.
Moodlakatte MITK: Inauguration of State Level SAVISHKAR Fest
A two-day State-Level Techno-Cultural and Management Fest Savishkar inaugurated with grandeur at Moodlakatte Institute of Technology Kundapur. Principal of the Institute Dr. Abdul Kareem unveiled the Logo of the event and initiated the Fest. Convener of the event, Vice Principal Dr.Melwin D’Souza, Director Brand Building Dr. Ramakrishna Hegde, Coordinator Prof Varun Kumar, Secretary Student Council Mr. Manoj Shetty, Vice- President Miss Pannaga Shetty, Student event co-ordinator Mr. Anish Putran were present on the occasion. Faculty and students of more than 30 participating colleges were present. Immediately after the inauguration various Techno-Cultural events and enthralling car expo also started.