ಮೂಡ್ಲಕಟ್ಟೆ ಎಮ್ ಐ ಟಿ: ಫ಼್ಯಾಷನ್ ಶೋ ವಿಜೇತರಾದ ವಿಧ್ಯಾರ್ಥಿಗಳು

ಜೆಸಿಐ ಕುಂದಾಪುರ ಸಿಟಿ ಆತಿತ್ಯ ದಲ್ಲಿ ಜರುಗಿದ ಜೇಸಿ ಸಪ್ತಾಹ ದ ಅಂಗ ವಾಗಿ ಮಿಸ್ಟರ್ ಕುಂದಾಪುರ ಮಿಸಸ್ ಕುಂದಾಪುರ ಸ್ಪರ್ಧೆ ಯಲ್ಲಿ ಮೂಡ್ಳಕಟ್ಟೆಯ ಎಮ್ ಐ ಟಿ ಕಾಲೇಜ್ ಗೆ ಪ್ರಶಸ್ತಿ ಲಭಿಸಿದೆ. ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದಲ್ಲದೆ ಮಿಸ್ ಕುಂದಾಪುರ ಆಗಿ ಆಯ್ಕೆಯಾಗಿರುತ್ತಾರೆ. ಪ್ರಥಮ ವರ್ಷದ ವಿಧ್ಯಾರ್ಥಿನಿಯರಾದ ಮಿಸ್ ಕುಂದಾಪುರ ಶಶಿಕಲ ರನ್ನರ್ ಪಸ್ಟ್ ಹಾಗೂ ಮಿಸ್ ಕುಂದಾಪುರ ಶ್ರೇಯ ಉಪಾಧ್ಯಾಯ ರನ್ನರ್ ಸೆಕೆಂಡ್ ಹಾಗೂ ಹುಡುಗರ ವಿಭಾಗದಲ್ಲಿ ಎಮ್ ಬಿ ಎ ವಿಧ್ಯಾರ್ಥಿ ಮಿಸ್ಟರ್ ಕುಂದಾಪುರ ಮುಲ್ಲ ಸಮೀರ್ ರನ್ನರ್ ಪಸ್ಟ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಧ್ಯಾರ್ಥಿ ಮಿಸ್ಟರ್ ಕುಂದಾಪುರ ಅರ್ಜುನ್ ರಾಜ್ ರನ್ನರ್ ಸೆಕೆಂಡ್ ಆಗಿ ವಿಜೇತರಾಗಿದ್ದಾರೆ. ಅಲ್ಲದೇ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ಡಾ ಸೋನಿ ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಸಪ್ತಾಹ ದ ಸಭಾಪತಿ ರಾಘವೇಂದ್ರ ಕುಲಾಲ್ ಎಮ್ ಐ ಟಿ ಕಾಲೇಜಿನ ಸಾಂಸ್ಕೃತಿಕ ಕ್ಲಬ್ ಸಂಯೋಜಕರಾದ ಪ್ರೊಫೆಸರ್ ‌ ಹರೀಶ್ ಕಾಂಚನ್ ಪ್ರೊಫೆಸರ್ ಸೂಕ್ಷ್ಮ ಎಸ್ ಅಡಿಗ, ಪ್ರೊಫ಼ೆಸರ್ ವೆಂಕಟೇಶ ಉಪಸ್ಥಿತರಿದ್ದರು.