

ಕುಂದಾಪುರ; ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ. ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ – ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ ಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀಮತಿ ಸೌಜನ್ಯ ಕರುಣಾಕರ ಶೆಟ್ಟಿ ಆಡಳಿತ ಅಧಿಕಾರಿ ಏ ವಿ ಬಾಳಿಗ ಮೆಮೋರಿಯಲ್ ಹಾಸ್ಪಿಟಲ್ ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್ . ಪ್ರೋಗ್ರಾಮ್ ಕೋಒರ್ ಡಿನೇಟರ್ ಕುಮಾರಿ ವೆಲ್ ಮೀರಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾ ಶ್ರೀಮತಿ ಸೌಜನ್ಯ ಕರುಣಾಕರ ಶೆಟ್ಟಿ ಅವರು ಮಾನಸಿಕ ಒತ್ತಡ ಹಾಗೂ ಅದರ ನಿರ್ವಹಣೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ನಿತ್ಯ ಮಾಡಿದರು. ಶರೀಲ್ ಸಾರ ಸ್ವಾಗತಿಸಿ ಸೆರೆನಾ ವಂದಿಸಿದರು.

