

ಕುಂದಾಪುರದ ಪ್ರತಿಷ್ಟಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ “ಸಾವಿಷ್ಕಾರ್ 2025” ಏಪ್ರಿಲ್ 2 ಮತ್ತು 3 ರಂದು ಬಹಳ ವಿಜೃಂಭಣೆ ಇಂದ ನಡೆಯಲಿದೆ. ರಾಜ್ಯಧ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂದಿಸಿದ ಹಲವು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲಿದ್ದಾರೆ. ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ನಗದು ಹಣ ಸಹಿತ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಸ್ಪರ್ಧಾಕೂಟದ ವಿಶೇಷ ಆಕರ್ಷಣೆಯಾಗಿ ಹಲವು ಆಕರ್ಷಕ ಮಾದರಿಗಳ ಕಾರು ಮತ್ತು ಬೈಕ್ ಗಳ ಪ್ರದರ್ಶನ ನಡೆಯಲ್ಲಿದ್ದು, ಅಲ್ಲದೆ ಅನುಭವಿ ತಜ್ಞರಿಂದ ಬೈಕ್ ಸ್ಟಂಟ್ ಪ್ರದರ್ಶನ ಕೂಡ ನಡೆಯಲಿದೆ. ಸಂಜೆಯ ಆಕರ್ಷಣೆಯಾಗಿ ಏಪ್ರಿಲ್ 2 ರಂದು, ಖ್ಯಾತ ಗಾಯಕಿ ದಿವ್ಯ ರಾಮಚಂದ್ರ ಮತ್ತು ತಂಡ ದಿಂದ ಮ್ಯೂಸಿಕಲ್ ನೈಟ್, ಕಾರ್ಯಕ್ರಮ ನಡೆಯಲಿದ್ದು , ಹಾಗೆಯೇ ಪ್ರಸಿದ್ಧ ರಾಪ್ ಗಾಯಕ ರಾಹುಲ್ ದಿಟೋ ಪ್ರಥಮ ಬಾರಿಗೆ ಕುಂದಾಪುರದ ಜನರನ್ನು ರಂಜಿಸಲು ಆಗಮಿಸುತ್ತಿದ್ದಾರೆ. ಎಪ್ರಿಲ್ 3 ರಂದು ಪ್ರಮುಖ ಆಕರ್ಷಣೆಯಾಗಿ ಸವಾರಿ ಮ್ಯುಸಿಕ್ ಬ್ಯಾಂಡ್ ತಂಡದಿಂದ ಕಾರ್ಯಕ್ರಮ ನಡೆಯಲಿಕ್ಕಿದೆ. ಎಪ್ರಿಲ್ 4 ರಂದು ಕಾಲೇಜಿನ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಧಕ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿಕ್ಕಿದ್ದು ಅದೇ ದಿನ ಸಂಜೆ ಕಾಲೇಜಿನ ವಾರ್ಷಿಕೋತ್ಸವದ ಹಮ್ಮಿಕೊಳ್ಳಲಾಗಿದೆ