ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮೇ ತಿಂಗಳ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಸ್ಪರ್ಧಾಕೂಟ ಸಾವಿಷ್ಕಾರ್ ನಡೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯಥೆಯನ್ನು ತೋರಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಸರ್ಟಿಫಿಕೇಟ್ ಕೂಡ ಸಿಗಲಿದೆ.
ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ ಆಕರ್ಷಣೆಯಾಗಿ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಇಟ್ಟು ಕೊಳ್ಳಲಾಗಿದೆ. ಮೊದಲ ದಿನ ಸಂಜೆಗೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ರಾಪ್ ಮಾದರಿಯ ಗೀತೆಗಳನ್ನು ಪರಿಚಯಿಸಿದ ಹೆಸರಾಂತ ರಾಪರ್ ಮತ್ತು ಬಿಗ್ ಬಾಸ್ ವಿಜೇತರಾದ ಚಂದನ್ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಲಿದ್ದಾರೆ. ಹಾಗೆಯೇ ರಿಯಾಲಿಟಿ ಶೋ ನಲ್ಲಿ ಹೆಸರು ಗಳಿಸಿದ ಗಾಯಕಿ ಶಶಿಕಲಾ ಸುನಿಲ್ ಮತ್ತು ಗಾಯಕ ಧನುಷ್ ಅವರ ಸಂಗೀತಾ ಕಾರ್ಯಕ್ರಮ ನಡೆಯಲಿದೆ.
ಎರಡನೇ ದಿನದ ಪ್ರಮುಖ ಆಕರ್ಷಣೆಯಾಗಿ, ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರಸಿದ್ಧ ಗಾಯಕ, ತನ್ನ ಜಾನಪದ ಶೈಲಿಯಲ್ಲಿ ಹಾಡಿ ಪ್ರಸಿದ್ದಿ ಪಡೆದಿರುವ, ನವೀನ್ ಸಜ್ಜು ಅವರು ತಮ್ಮ ಬ್ಯಾಂಡ್ ನೊಂದಿಗೆ ಅದ್ದೂರಿ ಕಾರ್ಯಕ್ರಮ ನೀಡಲಿದ್ದಾರೆ.
ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಅವರ ಕಾರ್ಯಕ್ರಮ ಉಡುಪಿಯಲ್ಲೇ ಮೊದಲ ಬಾರಿ ನಡೆಯಲಿದ್ದು, ಬಹು ದೊಡ್ಡ ಆಕರ್ಷಣೆಯಾಗಲಿದೆ.
ಹಾಗೆಯೇ ವಿದ್ಯಾರ್ಥಿಗಳು ಮತ್ತು ಯುವಜನರು ಇಷ್ಟ ಪಡುವ ಬೈಕ್ ಸ್ಟಂಟ್ ನ ಪ್ರದರ್ಶಿಸಲು ಅನುಭವಿ ಮತ್ತು ತರಬೇತಿ ಪಡೆದಿರುವ ಸ್ಟಂಟ್ ಮಾಸ್ಟರಗಳು ಬರಲಿದ್ದಾರೆ. ಡಾನ್ಸ್ ಕ್ಷೇತ್ರದಲ್ಲಿ ಹೆಸರು ಮಾಡಿದಂತ ಕೌಶಿಕ್ ಸುವರ್ಣ ಅವರ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ ಬೆಂಗಳೂರಿನ ದ್ವನಿವರ್ಧಕಗಳ ವ್ಯವಸ್ಥೆ ಪರಿಚಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಇಂತಹ ಒಂದು ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೆ ಕಾಲೇಜು ಆಡಳಿತ ಮಂಡಳಿ ಪ್ರೀತಿಯ ಆಮಂತ್ರಣ ನೀಡಿದೆ.
ಉಪಸ್ಥಿತಿ: ಪ್ರೊ ಮೆಲ್ವಿನ್ ಡಿ’ಸೋಜಾ, ಉಪಪ್ರಾಂಶುಪಾಲರು, ಎಂ ಐ ಟಿ, ಕುಂದಾಪುರ, ಡಾ. ರಾಮಕೃಷ್ಣ ಹೆಗಡೆ, ಡೈರೆಕ್ಟರ್ ಬ್ರಾಂಡ್ ಬಿಲ್ಡಿಂಗ್, ಪ್ರೊ. ವರುಣ್ ಕುಮಾರ್, ಕಾರ್ಯಕ್ರಮದ ಆಯೋಜಕರು.
Moodlakatte MIT : State Level Fest Savishkar
A two-day State-Level Cultural, Technical and Management Fest Savishkar will be held on May 1st and 2nd May at the prestigious Moodlakatte Institute of Technology Kundapur. More than 20 competitions will be held in this one program and students from around 30 colleges will participate and show their skills. The winners of all the competitions will get a certificate along with the cash prize.Various entertainment programs have been organized as main attractions on both the days to add color to the Fest. On the first day evening, Chandan Shetty, a renowned rapper who introduced rap style songs in the Kannada music industry and winner of Bigg Boss, will give a concert. Also, singer Sasikala Sunil and singer Dhanush, who gained fame in the reality shows, will give concerts. As the main attraction of the second day, another famous singer of Sandalwood, Naveen Sajju, who is famous for his folk style singing, will give a grand show with his band.
Chandan Shetty and Naveen Sajju’s show will be held for the first time in Udupi District and will be a huge attraction.
Also, experienced and trained stunt masters will come to perform bike stunts which are loved by students and youth.The program of Kaushik Suvarna, who has made a name for himself in the field of dance will also be held. Another special feature of this program is introducing Lightning and higher end Sound Systemsfrom Bangalore.
The college management has cordially invited all the art lovers for such a lavish event.
Appearance: Prof. Melwin D’Souza, Vice Principal, MIT, Kundapura, Dr. Ramakrishna Hegde, Director, Brand Building, Prof. Varun Kumar, Program Co-Ordinator.