

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೆಆರ್ ಎ ಎಮ್ ಕಾಲೇಜ್ನ ಹೆಚ್ಒಡಿ ಮತ್ತು ಪ್ರೊಫೆಸರ್
ಅಥರ್ವ ಆರ್ಗ್ಯಾನಿಕ್ಸ್ನ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಡಾ.ಅಪೇಕ್ಷ ರಾವ್ ಅವರು ಆಗಮಿಸಿದ್ದು
“ಇತ್ತೀಚಿನ ದಿನಗಳಲ್ಲಿ ನಾವು ದೇಹದ ಮಾತು ಕೇಳುವ ಬದಲು ಅದನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದೇವೆ.ನಾವು ವಿಶ್ವದಲ್ಲಿ ಕೇವಲ ಒಂದು ಧೂಳಿನ ಕಣವಷ್ಟೇ.ಹಾಗಾಗಿ ಇರುವಷ್ಟು ದಿನ ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯಿಂದ ಬದುಕುವುದು ಮುಖ್ಯ, ಅದಕ್ಕಾಗಿ ನಾವು ಪಾಲಿಸಬೇಕಾದ ನಾಲ್ಕು ಸೂತ್ರಗಳಾದ ಉತ್ತಮ ನಿದ್ರೆ, ವ್ಯಾಯಾಮ, ಆಹಾರ ಕ್ರಮ, ಹಾಗೂ ಒತ್ತಡ ನಿಯಂತ್ರಣ ಇವುಗಳ ಬಗ್ಗೆ ಮನಮುಟ್ಟುವಂತೆ ಸವಿವರವಾಗಿ ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಪ್ರೊಲಾಕೆ ಟೆಕ್ನಾಲಜೀಸ್ ಇದರ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಶ್ರೀಮತಿ ಸುಮಂಗಲ ತುಂಗ ಇವರು ಮಾತನಾಡಿ ಉದ್ಯಮಿಯಾಗಲು ಬೇಕಾದ ಗುಣಗಳು ,ಮಹಿಳೆಯರು ಉದ್ಯಮದಲ್ಲಿ ಎದುರಿಸುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳಾ ಸಾಧಕಿಯರನ್ನು ಸ್ಮರಿಸುತ್ತ ಅವರಂತೆ ನೀವೂ ಸಾಧನೆಗೈಯಬೇಕು ಎಂದು ವಿಧ್ಯಾರ್ಥಿನಿಯರಿಗೆ ಕರೆ ನೀಡಿದರು.
ಕಾಲೇಜಿನ ಮಹಿಳಾ ಸಾಧಕಿಯಾಗಿ ವಿಶ್ವೇಶ್ವರಯ್ಯ ವಿಶ್ವ ವಿಧ್ಯಾಲಯದ ಎಮ್ ಟೆಕ್ ಪದವಿಯ ಪರೀಕ್ಷೆಯಲ್ಲಿ ದ್ವಿತೀಯ ರಾಂಕ್ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿ , ಕಂಪ್ಯೂಟರ್ ಸೈನ್ಸ್ (ಡಾಟಾ ಸೈನ್ಸ್) ವಿಭಾಗದ ಉಪನ್ಯಾಸಕಿ ಶ್ರೀಮತಿ ಫ್ಹರಾನ್ ಇಮ್ರಾನ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸಂಯೋಜಕಿ ಪ್ರೊಫೆಸರ್ ಅಕ್ಷತ ನಾಯಕ್, ಡೀನ್ ಪ್ಲೇಸ್ಮೆಂಟ್ ಅಮೃತಮಾಲ, ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಫ್ರಾಹ ಕಾರ್ಯಕ್ರಮ ನಿರೂಪಿಸಿ ಶ್ರೇಯ ವಂದಿಸಿದರು