

ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆಯ ಅದರ ಅಂಗವಾಗಿ ಕುಂದಾಪುರದ ಚೈತನ್ಯ ವೃದ್ಧಾಶ್ರಮದಲ್ಲಿ ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಭೋಧಕ – ವಿದ್ಯಾರ್ಥಿವೃಂದವರು “ಮೈತ್ರಿ” ಕಾರ್ಯಕ್ರಮದಡಿ ವಿವಿಧ ಪ್ರದರ್ಶನದಿಂದ ಹಿರಿಯರನ್ನು ರಂಜಿಸಿದರು. ಚೈತನ್ಯ ವೃದ್ಧಾಶ್ರಮದ ಅಧ್ಯಕ್ಷರಾದ ಸಿಸಿಲಿ ಕೋಟ್ಯಾನ್ ಅವರು ಸಂಸ್ಥೆಯ ಕಾರ್ಯವೈಖರಿಯನ್ನು ಸೇವಾ ಮನೋಭಾವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿಯವರಾದ ಶ್ರೀಮತಿ ದಿವ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾ ಸಂಸ್ಥೆಗಳ ಭೋದಕರಾದ ಶ್ರೀಮತಿ ಅಮೃತಮಾಲ (ಎಂಐಟಿ), ಶ್ರೀಮತಿ ಅಕ್ಷತಾ ನಾಯಕ್(ಎಂಐಟಿ), ಶ್ರೀಮತಿ ಶಬೀನಾ (ಐಎಂಜೆಐಎಸ್ಸಿ), ಶ್ರೀಮತಿ ದಿವ್ಯ (ಎಂಸಿಎನ್), ಶ್ರೀಮತಿ ಚೈತ್ರಾ ಯಾಧವ್(ಎಂಐಟಿ), ಶ್ರೀ ಪ್ರವೀಣ್ ಖಾರ್ವಿ (ಐಎಂಜೆ) ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


