ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾಲಯವು, ಸಾಫ್ಟ್ವೇರ್ ದಿಗ್ಗಜ Honeywell ನ, Center of Excellence ಕಾರ್ಯಕ್ರಮದ ಕೇಂದ್ರವಾಗಿ ಆಯ್ಕೆಯಾಗಿದ್ದು ಇದರ ಉದ್ಘಾಟನೆಯನ್ನು 06/12/22 ರಂದು ಐಸಿಟಿ ಅಕಾಡೆಮಿ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಶ್ರೀ ವಿಷ್ಣು ಪ್ರಸಾದ್ ಡಿ ನೆರವೇರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ “ಶ್ರೀ ಅಜಿತ್ ಕುಮಾರ್, ಹಿರಿಯ ಶಾಖಾ ವ್ಯವಸ್ಥಾಪಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ” ವಿಧ್ಯಾರ್ಥಿಗಳು ವಿಧ್ಯೆಯ ಜೊತೆಗೆ ಇನ್ನಿತರ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ತಾನಾಗಿಯೇ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು, ಇದೇ ವೇಳೆ ಶ್ರೀ ವಿಷ್ಣು ಪ್ರಸಾದ್ ಡಿ” ಅವರು ಮಾತನಾಡಿ, ವಿಧ್ಯಾರ್ಥಿಗಳಿಗೆ ಈ ತರಬೇತಿ ಎಷ್ಟು ಮಹತ್ವವಾದುದು, ಅದರ ಪ್ರಯೋಜನಗಳೇನು ಹಾಗು ಇದರಿಂದ ಉದ್ಯೋಗಾವಕಾಶಗಳನ್ನು ಹೇಗೆ ಪಡೆಯಬಹುದು ಎಂದು ವಿವರಿಸಿ ಹೇಳಿದರು.
ಈ ಕಾರ್ಯಕ್ರಮದ ಪ್ರಥಮ ಹಂತವಾಗಿ 15 ದಿನದ ತರಬೇತಿ ಕಾರ್ಯಕ್ರಮವು ಆಧುನಿಕ ತಂತ್ರಜ್ಞಾನ ಯು ಐ ಪಾತ್ ಮೇಲೆ ನಡಿಯಲಿದೆ.
ಭಾರತದಲ್ಲಿ ಹನಿವೆಲ್ ಸೆಂಟರ್ ಆಫ್ ಎಕ್ಸೆಲೆನ್ಸ್ ಕೇಂದ್ರವಾಗಿ ಕೇವಲ 50 ಕಾಲೇಜುಗಳು ಮಾತ್ರ ಆಯ್ಕೆಯಾಗಿದ್ದು ಕರ್ನಾಟದಲ್ಲಿ ಕೇವಲ 9 ಕಾಲೇಜ್ ಗೆ ಮಾತ್ರ ಅವಕಾಶ ಸಿಕ್ಕಿರುತ್ತದೆ. ಈ 9 ಕಾಲೇಜ್ ಗಳಲ್ಲಿ ಎಂ ಐ ಟಿ ಕುಂದಾಪುರವು ಒಂದಾಗಿದ್ದು ಮತ್ತು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಏಕೈಕ ಕಾಲೇಜು ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜಿನ ಅಧ್ಯಕ್ಷರಾದ ಸಿದ್ದಾರ್ಥ ಜೆ ಶೆಟ್ಟಿ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
“IMJ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಶ್ರೀ. ದೋಮ ಚಂದ್ರಶೇಖರ, ಅವರು ಅಧ್ಯಕ್ಷತೆ ವಹಿಸಿದ್ದು,ಕಾರ್ಯಕ್ರಮದಲ್ಲಿ “ಎಂಐಟಿಕೆ ಪ್ರಾಂಶುಪಾಲರಾದ, ಡಾ. ಚಂದ್ರರಾವ್ ಮದಾನೆ”, “ಎಂಐಟಿಕೆ ಉಪ ಪ್ರಾಂಶುಪಾಲರಾದ, ಪ್ರೊ.ಮೆಲ್ವಿನ್ ಡಿಸೋಜಾ”, “ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್”, “ಪ್ಲೇಸ್ಮೆಂಟ್ ಡೀನ್ ಪ್ರೊ.ಅಮೃತಮಾಲಾ”, ಎಲ್ಲಾ ಡೀನ್‌ಗಳು, ವಿಭಾಗ ಮುಖ್ಯಸ್ಥರು, ಸಿಬ್ಬಂದಿ ಮತ್ತು, ವಿದ್ಯಾರ್ಥಿಗಳು ಭಾಗವಹಿಸಿದ್ದರು.