

ಡಿಸೆಂಬರ್-ಜನವರಿ 2024-25 ರಲ್ಲಿ ನಡೆದ ರಾಜೀವ್ ಗಾಂಧಿ ಯೂನಿವರ್ಸಿಟಿ ಒಫ್ ಹೆಲ್ತ್ ಸೈನ್ಸಸ್ ಪರೀಕ್ಷೆಗಳಲ್ಲಿ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಿದೆ. ಅಂತಿಮ ವರ್ಷದಲ್ಲಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದು 96% ತೇರ್ಗಡೆ,
3ನೇ ವರ್ಷದಲ್ಲಿ 10 ಡಿಸ್ಟಿಂಕ್ಷನ್ 90% ತೇರ್ಗಡೆ, 4ನೇ ಸೆಮಿಸ್ಟರ್ನಲ್ಲಿ 2 ಡಿಸ್ಟಿಂಕ್ಷನ್ 95% ಉತ್ತೀರ್ಣತೆ, 2 ನೇ ಸೆಮಿಸ್ಟರ್ನಲ್ಲಿ 2 ಡಿಸ್ಟಿಂಕ್ಷನ್ 93% ಉತ್ತೀರ್ಣತೆಯ ಫಲಿತಾಂಶ ದೊರೆತಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಗಮನಾರ್ಹ ಸಾಧನೆಗಾಗಿ ಆಡಳಿತ ಮಂಡಳಿ, ಪ್ರಾoಶುಪಾಲರು ಹಾಗು ಅಧ್ಯಾಪಕ ವೃಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.