JANANUDI.COMNETWORK
ಮೂಡುಬೆಳ್ಳೆ, ಮಾ.10; ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಗುರುತಿಸಿ , ಅವುಗಳನ್ನು ಬೆಳೆಸಿ ಯಶಸ್ವಿ ವ್ಯಕ್ತಿತ್ವವನ್ನು ರೂಪಿಕೊಳ್ಳಬೇಕು. ಇದಕ್ಕಾಗಿ ಕಾಲೇಜಿನಲ್ಲಿ ವ್ರತ್ತಿ ಮತ್ತು ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಸಿ ಎ, ಬ್ಯಾಂಕಿಂಗ್, ಐ ಎ ಎಸ್, ಕೆ ಎ ಎಸ್, ಮತ್ತಿತರ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಂಸ್ಥೆಯು ಮಹತ್ತರ ಕೊಡುಗೆ ನೀಡಲಿದೆ ” ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಕ್ಲೆಮೆಂಟ್ ಮಸ್ಕರೇನಸ್ ಹೇಳಿದರು. ಮುಖ್ಯ ಅಥಿತಿಗಳಾದ
ಮಿಲಾಗ್ರಿಸ್ ಕಾಲೇಜು ಕಲ್ಯಾನ್ಪುರ ಇದರ ಪ್ರಾಂಶುಪಾಲ ಡಾ ವಿನ್ಸೆಂಟ್ ಆಳ್ವಾ ಮತ್ತು ಸಿಎ ಪ್ರಿತೇಶ್ ಬರ್ಟನ್ ಡೆಸಾ ಕಾಲೇಜಿನ ಭಿತ್ತಿ ಪತ್ರವನ್ನು ಅನಾವರಣಗೊಳಿಸಿದರು. ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ್ ಪೂಜಾರಿಯವರು ಶಿಕ್ಷಕರನ್ನು ಅಭಿನಂದಿಸಿದರು.
ಆಂಗ್ಲ ಮಧ್ಯಮ ಶಾಲಾ ಪ್ರಾಂಶುಪಾಲ ಬ್ರದರ್ ಫಿಲಿಪ್ ನೊರೊನ್ಹಾ, ಪ್ರೌಢಶಾಲಾ ಹಿರಿಯ ಶಿಕ್ಷಕಿ ಸುನೀತಾ ಕಾಮತ್ , ವಿಧ್ಯಾರ್ಥಿಗಳು ಮತ್ತು ಹೆತ್ತವರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕ ವಿಜ್ನಾನ ಉಪನ್ಯಾಸಕ ದಿಲೀಪ್ ಕುಮಾರ್ ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಜೆಸಿಂಥಾ ನತಾಲಿಯ ಲೋಬೊ ವಂದಿಸಿ , ಆಂಗ್ಲಭಾಷಾ ಉಪನ್ಯಾಸಕಿ ಸುಧಾಭಟ್ ನಿರೂಪಿಸಿದರು. ವಿಧ್ಯಾರ್ಥಿ ನಾಯಕರಾದ ಜೆಮಿಮಾ ಅರಾನ್ಹಾ ಮತ್ತು ಸಂತೊಷ್ ಹಾಜರಿದ್ದರು.