ಕುಂದಾಪುರ,ಸೆ.8: (8-9-24) ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು ಮೊದಲಿಗೆ ಹೊಸ ಬೆಳೆ ಭತ್ತದ ತೇನೆಗಳನ್ನು ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಆಶಿರ್ವದಿಸುವ ಮೂಲಕ ಚಾಲನೆಯನ್ನು ನೀಡಿದರು. ನಂತರ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡಿದರು. ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.
ಧರ್ಮಗುರು ಅ|ವಂ|ಪಾವ್ಲ್ ರೇಗೊ ಅವರ ಭಕ್ತಿಕರೊಂದಿಗೆ ದಿವ್ಯ ಬಲಿದಾನ ಅರ್ಪಿಸಿ, ‘ಇಂದು ಮೇರಿ ಮಾತೆಯ ಜನ್ಮ ದಿನದ ಹಬ್ಬ ಆಚರಿಸುತ್ತಿದ್ದೇವೆ, ಮೇರಿ ಮಾತೆ ದೇವರ ಮಾತೆ, ಮೇರಿ ಮಾತೆ ದೇವರ ಸುಂದರ ಪವಿತ್ರ ಸ್ರಷ್ಟಿ ಆಗಿದ್ದಾಳೆ, ಯೇಸು ಕ್ರಿಸನು ನಮಗೆ ಬೇಕಾದಲ್ಲಿ, ನಾವು ಮೇರಿ ಮಾತೆಯಲ್ಲಿ ಪ್ರಾರ್ಥಿಸೋಣ, ಮೇರಿ ಮಾತೆಯ ಮುಖಾಂತರ ಯೇಸು ಕ್ರಿಸ್ತನಲ್ಲಿ ತಲುಪುವುದು ಸುಲಭ. ಈ ಪ್ರಪಂಚದಲ್ಲಿ ಸಣ್ಣ ಮಕ್ಕಳು ದೇವದೂತರಂತೆ ಇದ್ದ ಹಾಗೆ, ಮಕ್ಕಳು ನಮ್ಮ ಪಾಲಿಗೆ ಚಿನ್ನವಿದ್ದಂತೆ, ನಾವು ಮಕ್ಕಳನ್ನು ಪ್ರೀತಿಸೋಣ, ಮಕ್ಕಳು ಕುಟುಂಬಕ್ಕೆ ಕಳಶ ಇದ್ದಂತೆ, ಇಂದು ನಾವು ಕುಟುಂದ ಹಬ್ಬವನ್ನು ಆಚರಿಸುತ್ತಿದ್ದೇವೆ, ಭೋಜನ ಕುಟುಂಬದ ಚೆಂದ ಹೆತ್ತವರು ಸೇರಿ ಮೇರಿ ಮಾತೆಯ ಜನ್ಮದಿದಂದು, ಒಟ್ಟಿಗೆ ಭೋಜನ ಮಾಡುವ, ಒಟ್ಟಿಗೆ ಭೋಜನಾ ಮಾಡುವ ಕುಟುಂಬ ಒಟ್ಟಿಗೆ ಬಾಳುತ್ತದೆ, ಇಂದು ನಾವು ಪ್ರಕೃತಿಯ ಹಬ್ಬವನ್ನು ಕೂಡ ಆಚರಿಸುತ್ತಿದ್ದೇವೆ, ದೇವರು ನಮಗಾಗಿ ಸುಂದರವಾದ ಪ್ರಕೃತಿಯನ್ನು ಸ್ರಷ್ಟಿಸಿದ್ದಾನೆ, ಪ್ರಕೃತಿಯಲ್ಲಿ ನಾವು ಬೆಳೆದ ಬೆಳೆಗಳ ಮೇಲೆ, ಧನ್ಯವಾದ ಸಲ್ಲಿಸಿ, ದೇವರ ಆಶಿರ್ವಾದ ಕೋರಿ ಅವಗಳನ್ನು ಭುಜಿಸುವ, ಇಂದು ನಾವು ಮೇರಿ ಮತೆಯಹೆಸರಿನಲ್ಲಿ ಹೆಣ್ಣು ಮಕ್ಕಳ ಹಬ್ಬವನ್ನು ಕೂಡ, ಹೆಣ್ಣು ಮಕ್ಕಳು ಮೇರಿ ಮಾತೆಯ ಗುಣಗಳನ್ನು ಪಾಲಿಸಬೇಕು, ಹೆಣ್ಣು ಮಕ್ಕಳಿಗೆ ನಾವು ರಕ್ಷಣೆ ನೀಡುವ ಗೌರವ ನೀಡುವ, ನಾವೆಲ್ಲರೂ ಮೇರಿ ಮಾತೆಯ ಆದರ್ಶ ಗುಣಗಳಾದ ಸಹನೆ, ಕ್ಷಮೆ, ದಯೆ, ಭಕ್ತಿ, ಪ್ರಾರ್ಥನೆಯ ಮುಂತಾದ ಗುಣಗಳನ್ನು ಅಳವಡಿಸಿಕೊಂಡು, ಮೇರಿ ಮಾತೆಯ ಜನ್ಮ ದಿನವನ್ನು ಆಚರಿಸೋಣ, ನಾವು ಮೇರಿ ಮಾತೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು, ನಾವು ಮೇರಿ ಮಾತೆಯ ಜನ್ಮದಿನಕ್ಕೆ ಅರ್ಪಿಸುವ ದೊಡ್ಡ ಕಾಣಿಕೆಯಾಗಿದೆ ” ಎಂದು ಅವರು ಸಂದೇಶ ನೀಡಿದರು.
ಬಲಿದಾನದ ಬಳಿಕ ಅವರು ಎಲ್ಲರಿಗೂ ಶುಭಾಶಯಗಳನ್ನು ಕೋರಿ ವಂದನಾರ್ಪಣೆ ಮಾಡಿದರು. ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದ ಬಲಿದಾನದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಇದ್ದರು.