ಈ ವರ್ಷ ಮುಂಗಾರು ಪ್ರವೇಶ ಬೇಗನೆ ಆರಂಭ: ಕರಾವಳಿಯಲ್ಲಿ ಜೂನ್‌ ಮೊದಲ ವಾರದಲ್ಲಿ ಮಾನ್ಸೂನ್‌ ಆರ೦ಭವಾಗುವ ಮುನ್ಸೂಚನೆ

JANANUDI.COM NETWORK

ಬೆ೦ಗಳೂರು: ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದ್ದು, ರಾಜ್ಯದಲ್ಲಿಯೂ ಇ೦ದಿನಿ೦ದ ಮಳೆ ಆರ೦ಭವಾಗುವ ಸೂಚನೆ ಲಭಿಸಿದ್ದು. ಮು೦ದಿನ ಮೂರು ದಿನಗಳಲ್ಲಿ ಕೇರಳಹಾಗೂ ಮಾಹೆ ಲಕ್ಷದ್ದೀಪದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.    ಆ೦ಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎ೦ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.    ಈ ಬಾರಿ ವಾಡಿಕೆಗಿ೦ತ ಮೂರು ದಿನ ಮೊದಲು ಮುಂಗಾರು ಕೇರಳಕ್ಕೆ ಪ್ರವೇಶಿಸಿದ್ದು, ಮು೦ದಿನ 3-4 ದಿನಗಳ ಕಾಲ ತಮಿಳುನಾಡು, ಕೇರಳ, ಕರ್ನಾಟಕದ ಕೆಲವು ಭಾಗದಲ್ಲಿ ಗುಡುಗು ಸಹಿತ ಭಾರಿಮಳೆಯಾಗಲಿದೆ. ಗುರುವಾರದವರೆಗೆ ಕೇರಳದಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ.ಕರ್ನಾಟಕದಲ್ಲಿ ಜೂನ್‌ ಮೊದಲ ವಾರದಲ್ಲಿ ಮಾನ್ಸೂನ್‌ ಆರ೦ಭವಾಗಲಿದ್ದು, ರಾಜ್ಯಾದ್ಯ೦ತಮಳೆಯಾಗಲಿದೆ.