

ಶ್ರೀನಿವಾಸಪುರ : ಹುಟ್ಟಿದ ಮೇಲೆ ಸಾವು ಖಚಿತ. ಆದರೆ ಆತುರದ ನಿರ್ಧಾರವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು, ಆತುರದ ನಿರ್ಧಾರವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಮ್ಮ ಕುಟುಂಬವನ್ನ ಬೀದಿಪಾಲು ಆಗುತ್ತದೆ. ಇದರೊಂದಿಗೆ ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಎಂದರು. ಆದ್ದರಿಂದ ಪ್ರತಿಯೊಬ್ಬರು ಸಹ ತಮ್ಮ ಜೀವನವನ್ನ ಜವ್ದಾರಿಯುತವಾಗಿ ನಡೆಸಿಕೊಂಡು ಹೋಗಬೇಕು ಎಂದು ಶ್ರೀನಿವಾಸಪುರ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಹೇಳಿದರು.
ತಾಲೂಕಿನ ಶೀಗೆನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ ಸೋಮವಾರ ರಾತ್ರಿ ಧನ ಸಹಾಯ ನೀಡಿ ಮಾತನಾಡಿದರು.
ಮೃತರ ತಂದೆ ವೆಂಕಟೇಶಪ್ಪ ರವರಿಗೆ ಸಾಂತ್ವನವನ್ನು ಹೇಳಿ, ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಹೆಚ್ಚಿನ ತನಿಖೆ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಧನ ಸಹಾಯ ಮಾಡಿ, ಮಾನವೀಯತೆ ಮೆರದರು.
ಈ ಸಮಯದಲ್ಲಿ ಯಲ್ದೂರು ಹೊರಠಾಣೆ ಅಧಿಕಾರಿಗಳಾದ ಶ್ರೀನಿವಾಸ್, ಆನಂದಬಾಬು, ಶ್ರೀನಾಥ್ ಇದ್ದರು.