ಆಧುನಿಕ ಯುಗದ ಪವಾಡ ಪುರುಷ ಸಂತ ಪಾದ್ರೆ ಪಿಯೊರ ಹಬ್ಬ ಅವರ ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಣೆ

ಮಂಗಳೂರು : ಆಧುನಿಕ ಯುಗದ ಪವಾಡ ಪುರುಷರಾದ ಸಂತ ಪಾದ್ರೆ ಪಿಯೊರವರ ಹಬ್ಬವನ್ನು ಸಂತ ಅನ್ನಾ ಫ್ರಾಯರಿಯ ಸಂತ ಪಾದ್ರೆ ಪಿಯೊರವರ ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಹಬ್ಬದ ಬಲಿಪೂಜೆಯನ್ನು ಅ। ವಂ। ಡಾ| ಫ್ರಾನ್ಸಿಸ್‌ ಸೆರಾವೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು,30 ಧರ್ಮಗುರುಗಳು ಮತ್ತು ಅಪಾರಭಕ್ತಾದಿಗಳ ಸಮ್ಮುಖದಲ್ಲಿ ಅರ್ಪಿಸಿದರು. ಸಂತ ಪಾದ್ರೆ ಪಿಯೊರವರ ಸರಳತೆ. ವಿಧೇಯತೆ ಮತ್ತು ವಿನಯತೆಯನ್ನು ನಮ್ಮ ಜೀವನದಲ್ಲಿ ಒಗ್ಗೂಡಿಸಲು  ಕರೆ ಇತ್ತರು. ಸಂತರ ವಿಜ್ಞಾಪನೆಯಿಂದ ದೊರಕಿದ ಎಲ್ಲಾ ಉಪಕಾರಗಳನ್ನು ಸ್ಮರಿಸುತ್ತಾ ಪಾದ್ರೆ ಪಿಯೊರವರ ಸ್ವರೂಪ ಮತ್ತು ಪರಮಪ್ರಸಾದದ ಮೆರವಣಿಗೆಯನ್ನು ಸಂತ ಅನ್ನಾ ಫ್ರಾಯರಿಯ ಸುತ್ತಲೂ ನಡೆಸಲಾಯಿತು.

ಪಾದ್ರೆ ಪಿಯೊರವರ ಹಬ್ಬಕ್ಕೆ ತಯಾರಿಯಾಗಿ 9 ದಿನಗಳ ನವೇನ, ಬಲಿಪೂಜೆ ಮತ್ತು ಒಂದು ದಿನದ ರೋಗಸೌಖ್ಯ ಧ್ಯಾನಕೂಟವನ್ನು ಸಹೋದರ ಪ್ರಕಾಶ್‌, ಬ್ಯಾಂಡ್ರಾ, ವಂ| ಧರ್ಮಗುರು ರಿಚ್ಚಡ್‌ ಕ್ಪಾಡ್ರಸ್‌, ವಂ| ಧರ್ಮಗುರು ರೂಕ್ಕಿ ಡಿಕುನ್ಹಾ ಮತ್ತು ತಂಡದವರು ನಡೆಸಿಕೊಟ್ಟರು. ಹಲವಾರು ಭಕ್ತರು ಆಧ್ಯಾತ್ಮಿಕವಾಗಿ ಗುಣಮುಖರಾಗಿ ಸಂತಸಪಟ್ಟರು.

    ರೋಗಿಷ್ಠರಿಗಾಗಿ ಮತ್ತು ವಯೋವ್ಯದ್ಧರಿಗಾಗಿ ಸಪ್ಟೆಂಬರ್‌ 22ರಂದು ಆರಾಧನೆ ಮತ್ತು ಪಲಿಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಲವರು ಆದ್ಯಾತ್ಮಿಕವಾಗಿ ಬಂಧನ ಮುಕ್ತಗೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಸಂತ ಹಾದ್ರೆ ಪಿಯೊರವರ ಮೂಲಕ ಬೇಡಿದ ಹಲವಾರು ಪ್ರಾರ್ಥನೆಗಳು ಫಲಿಸಿದ ಕಾರಣ ಬಹಳಷ್ಟು ಜನರು ಸಂತ ಪಿಯೊರವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಪ್ರಾರ್ಥನೆಗಳನ್ನು ಅರ್ಪಿಸುತ್ತಾರೆ. ಕಾಪುಚಿನ್‌ ಸಭೆಯ ಈ ಗುಣಪಡಿಸುವ ಸಂತರು ಪವಾಡಗಳಿಗೆ ಪ್ರಸಿದ್ದರು. 10 ದಿನಗಳ ಹಬ್ಬದ ಸಂಭ್ರಮವು ಅದ್ದೂರಿಯಾಗಿ ನಡೆಯಲು ಲಭಿಸಿದ ದೇವರ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಲಾಯಿತು.