

ಕೋಲಾರ,ಏ.04: ಕೆಜಿಎಫ್ನ ಡಾ.ತಿಮ್ಮಯ್ಯ ತಾಂತ್ರಿಕ ವಿದ್ಯಾಲಯದಲ್ಲಿ 2025-26ನೇ ಸಾಲಿನ ಸಿಇಟಿ ಪರೀಕ್ಷೆಗೆ ಪಿಯುಸಿ ವಿದ್ಯಾರ್ಥಿಗಳನ್ನು ಸನ್ನದ್ದಗೊಳಿಸಲು ಉಚಿತ ಅಣುಕು ಸಿಇಟಿ ಪರೀಕ್ಷೆಯನ್ನು ಏಫ್ರಿಲ್ 6 ರ ಭಾನುವಾರ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಹಮ್ಮಿಕೊಳ್ಳಲಾಗುವುದೆಂದು ಪ್ರಾಂಶುಪಾಲ ಸೈಯದ್ ಅರಿಫ್ ತಿಳಿಸಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬರುವ ವಿದ್ಯಾರ್ಥಿಗಳು ಅಣುಕು ಸಿಇಟಿ ಟೆಸ್ಟ್ಗೆ ತಮ್ಮ ಹೆಸರುಗಳನ್ನು ನೊಂದಯಿಸಿಕೊಂಡು ಭಾನುವಾರ ಪರೀಕ್ಷೆ ಬರೆಯಲು ಅನ್ಲೈನ್ ಮೂಲಕ ತಮ್ಮ ಹೆಸರುಗಳನ್ನು ಕಾಲೇಜಿನ ತಿತಿತಿ.ಜಡಿಣಣiಣ.eಜu.iಟಿ ವೆಬ್ಸೈಟ್ ಅಥವಾ ಕಾಲೇಜಿನಲ್ಲಿ ನೊಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ
ಪರಿಕ್ಷೆ ಬರೆಯಲು ಬಸ್ ವ್ಯವಸ್ಥೆ:
ಜಿಲ್ಲೆಯ ಕೋಲಾರ, ಮುಳಬಾಗಿಲು, ಬಂಗಾರಪೇಟೆ ಬೇತಮಂಗಲದಿಂದ ಬಸ್ ನಿಲ್ದಾದಿಂದ ಭಾನುವಾರ 8 ಗಂಟೆಗೆ ಅಣುಕು ಟೆಸ್ಟ್ ಪರೀಕ್ಷೆ ಬರೆಯಲು ಬರುವ ವಿದ್ಯಾಥ್ರ್ಯಿಗಳಿಗೆ ಡಾ.ತಿಮ್ಮಯ್ಯ ಕಾಲೇಜಿನ ಅಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹಾಗೂ ಕಾಲೇಜಿನಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುವುದೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಸೈಯದ್ ಅರಿಫ್ ಮಾತನಾಡಿ, ವಿದ್ಯಾರ್ಥಿಗಳು ಅಣುಕು ಸಿಇಟಿ ಪರಿಕ್ಷೆಗೆ 5 ರಿಂದ 6 ವರ್ಷಗಳ ಪ್ರಶ್ನೆ ಪತ್ರಿಕೆಗಳಲ್ಲಿರುವ ಪ್ರಶ್ನೆಗಳನ್ನು ಸಿದ್ದಪಡಿಸಿ ಮಾಕ್ ಟೆಸ್ಟ್ ಬರೆಯಲು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಇದರಿಂದ ಮುಂದಿನ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಸನ್ನದ್ದಗೊಳಿಸುವುದು ಮಾಕ್ ಟೆಸ್ಟ್ನ ಮುಖ್ಯ ಉದ್ದೇಶ, ಮಾಕ್ ಟೆಸ್ಟ್ನಲ್ಲಿ ಅಧಿಕ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಒಂದು ಲ್ಯಾಪ್ಟಾಪ್, ಒಂದು ಟ್ಯಾಬ್, 3. ಮೊಬೈಲ್ ಪೋನ್, 10 ಕ್ಯಾಲ್ಕೇಟರ್ಗಳನ್ನು ಬಹುಮಾನವಾಗಿ ನೀಡಲಾಗುವುದೆಂದರು. ಮಾಕ್ ಪರೀಕ್ಷೆ ಬರೆಯಲು ಹೆಸರನ್ನು ನೊಂಧಾಯಿಸಿಕೊಳ್ಳಲು ಹಮ್ಮಿರಾಜು. ಮೊ.ಸಂಖ್ಯೆ-9448713918 ಹರೀಶ್ ಮೊ.-897082597 ಬಸ್ ವ್ಯವಸ್ಥೆಗಾಗಿ ಮೊ.ಸಂಖ್ಯೆ-ಕುಮಾರ್.29845023138 ಸಂಪರ್ಕಸಬೇಕೆಂದು ಕೋರಲಾಗಿದೆ.
