ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಶಾಸಕ ಕೆ.ಆರ್. ರಮೇಶ್ ಕುಮಾರ್ ಮಗ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಜೆಡಿಎಸ್ ನಾಯಕರು ಸಾಬೀತು ಮಾಡಿದರೆ ರಮೇಶ್ ಕುಮಾರ್ ಅವರಿಂದ ರಾಜಕೀಯ ನಿವೃತ್ತಿ ಕೊಡಿಸುತ್ತೆವೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು ತಿಳಿಸಿದರು . ಪಟ್ಟಣದ ಪ್ರವಾಸ ಮಂದಿರ ದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ , ಶ್ರೀನಿವಾಸಪು ರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ , ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಜೆಡಿಎಸ್ ಪಕ್ಷದ ಜಿಲ್ಲಾಧ್ಯಾಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾಡಿರುವ ಆರೋಪಗಳನ್ನು ಸಾಬೀತು ಪಡೆಸಲಿ , ಸಾಬೀತಾದರೆ ನಮ್ಮ ಶಾಸಕರಿಂದ ರಾಜಕೀಯ ನಿವೃತ್ತಿ ಗೊಳಿಸುತ್ತೇವೆ . ಇಲ್ಲ ಈ ಮೂವರು ವ್ಯಕ್ತಿಗಳು ರಾಜಕೀಯ ನಿವೃತ್ತಿ ಪಡೆಯುತ್ತಿರ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚಿಗೆ ನಡೆದ ಜನತಾ ಜಲ ಧಾರೆ ಸಭೆಯಲ್ಲಿ ಶಾಸಕರ ಮಗನ ಬಗ್ಗೆ ಮಾತನಾಡಿ, ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ . ಅಲ್ಲ ಸ್ವಾಮಿ ಕ್ರಿಕೆಟ್ ಬೆಟ್ಟಿಂಗ್ ನಡೆಸ ಬೇಕೆಂದರೆ ಮೊಬೈಲ್‌ನಲ್ಲಿ ಆಪ್ ಇರಬೇಕು . ಇಲ್ಲವೇ ಇವರ ಬ್ಯಾಂಕ್ ಅಕೌಂಟ್‌ನಿಂದ ಬೇರೆಯವರ ಅಕೌಂಟಿಗೆ ಹಣ ಸಂದಾಯವಾಗಿರಬೇಕು . ಅಂತಹ ಯಾವುದೇ ರೀತಿಯಾದ ಘಟನೆ ನಡೆದಿಲ್ಲ ಎಂದರು . ರಮೇಶ್ ಕುಮಾರ್ ಬುದ್ದಿ ಕಲಿಯಬೇಕಾಗಿಲ್ಲ. ಇಬ್ರಾಹಿಂರವರು ಸಮಯಕ್ಕೆ ತಕ್ಕಂಗೆ ಪಕ್ಷಗ ಳನ್ನು ಬದಲಾವಣೆ ಮಾಡುತ್ತಾರೆ. ತಿಂದ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ . ನೀರಾವರಿ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲು ಬಂದವರು ರಮೇಶ್ ಕುಮಾರರನ್ನು ಗುರಿ ಮಾಡಿಕೊಂಡಿರುವುರು ಹೊಟ್ಟೆ ತುಂಬುತ್ತ ದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಗಾಂಡ್ಲಹಳ್ಳಿ ದರ್ಶನ್ ಮಾತನಾಡಿ , ಎತ್ತಿಹೊಳೆ ಕಾಮಾಗಾರಿ ಕಾಂಗ್ರೆಸ್ ಸರ್ಕಾರದಲ್ಲಿ ಮಿಂಚಿನ ವೇಗದಲ್ಲಿ ಸಾಗುತ್ತಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಬಂದ ಮೇಲೆ ಕಾಮಗಾರಿ ನಿಂತುಹೋಗಿದೆ . ಇದನ್ನು ವೆಂಕಟ ಶಿವಾರೆಡ್ಡಿ ಆಪ್ತರಾದ ಆರೋಗ್ಯ ಸಚಿವ ಸುಧಾಕರ್‌ರವರಿಗೆ ಪ್ರಶ್ನೆ ಮಾಡಿಲ್ಲ. ನಿಮಗೆ ಬೇಕಾಗಿರುವದು ರಾಜಕೀಯ ಲಾಭ ಮಾತ್ರ ನೀರು ತರಬೇಕಾದ ಕಳ ಕಳಿ ಇಲ್ಲ . ಅದು ಇರುವುದು ಕೇವಲ ರಮೇಶ್ ಕುಮಾರ್‌ರವರಿಗೆ ಮಾತ್ರ ಎಂದರು . ಕಾಂಗ್ರೆಸ್ ಕಾರ್ಯಕರ್ತ ರಾದ ವೇಣು , ಹರೀಶ್‌ಯಾದವ್ , ಗೋಪಾಲ್ , ಶಿವ ರಾಜ್ , ಮುಂತಾದವರು ಹಾಜರಿದ್ದರು