ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ ಎಂ.ಶಶಿಧರ್ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ( ಪಿಎಚ್ಡಿ ) ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಎಂ.ರೂಪಕಲಾ ಅವರು ಕೋಲಾರ ಜಿಲ್ಲಾ ಪಂಚಾಯಿತ್ನಲ್ಲಿ ಮಹಿಳಾ ಸದಸ್ಯರ ಪಾತ್ರ ಒಂದು ಅಧ್ಯಯನ –೨೦೧೦–೧೫ ‘ ಎಂಬ ಮಹಾಪಬಂಧವನ್ನು ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಶಂಕರನಾರಾಯಣಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದು , ಇದಕ್ಕೆ ವಿವಿಯಿಂದ ಪಿಹೆಚ್ಡಿ ಪದವಿ ಸಿಕ್ಕಿದೆ .
ಮುಕ್ತ ವಿವಿಯ ಮುಂದಿನ ಘಟಿಕೋತ್ಸವದಲ್ಲಿ ಈ ಪಿಎಚ್ಡಿ ಪದವಿಯನ್ನು ಪ್ರದಾನ ಮಾಡಲಾಗುವುದು ಎಂದು ವಿವಿಯ ಪರೀಕಾಂಗ ಕುಲಸಚಿವರು ತಿಳಿಸಿದ್ದಾರೆ.