ಕೆಸಿ ವ್ಯಾಲಿ ನೀರುನಿಂದಾಗಿ ಈ ಭಾಗದ ಜನರಿಗೆ ವರದವಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 2 : ಕೆಸಿ ವ್ಯಾಲಿ ನೀರುನಿಂದಾಗಿ ಈ ಭಾಗದ ಜನರಿಗೆ ವರದವಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದವತಿಯಿಂದ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಜಿಲ್ಲೆಯಲ್ಲಿ ನೀರಿನ ಮಟ್ಟವು 1400 ಅಡಿಗಳಷ್ಟು ಆಳಕ್ಕೆ ದಾಟಿತ್ತು, ಆದರೆ ಇಂದು ನೀರಿನ ಮಟ್ಟವು 600 ಕ್ಕೆ ಬಂದಿರುವುದು ಸಂತಸದ ವಿಚಾರ ಎನಿಸಿದೆ. ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ವಿತರಣೆ 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ಮನೆಗಳನ್ನು ನೀಡಲಾಗುವುದು, ಸಿಸಿ ರಸ್ತೆ, ಸರ್ಕಾರಿ ಶಾಲೆಗಳ ಪುನಃಶ್ಚೇತನ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ನಾನು ನಿಮ್ಮ ಸೇವೆ ಮಾಡಲ್ಲಿಕ್ಕೆ ಅವಕಾಶ ಮಾಡಿಕೊಡಿ. ನೀವು ನನ್ನನ್ನು ಗೆಲ್ಲಿಸುವುದರ ಮೂಲಕ ಆರ್ಶೀವಾದ ಮಾಡಿದರೆ ವಿಧಾನ ಸೌದದಲ್ಲಿ ನಿಮ್ಮ ಪರವಾಗಿ ದ್ವನಿ ಎತ್ತುತ್ತೇನೆ ಎಂದರು . ಇಲ್ಲವಾದರೆ ನನ್ನ ತೋಟಕ್ಕೆ ಹೋಗಿ ಕುರಿ, ಮೇಕೆ ಮೇಯಿಸಿಕೊಂಡು ವಿಶ್ರಾಂತಿ ಪಡೆಯುತ್ತೇನೆ ಎಂದರು.
ಆಂಬೇಡ್ಕರ್ ರವರ ತತ್ವದ ಹಾಗೂ ಆಶಯದ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇನೆ . ಯುವ ಸಮುದಾಯವು ಅಂಬೇಡ್ಕರ್ ವಿಚಾರ ಧಾರೆಗಳನ್ನು ಅರಿತುಕೊಳ್ಳಬೇಕು.
ಕೇಂದ್ರ ಸರ್ಕಾರ ವೈಪಲ್ಯದ ಯೋಜನೆಗಳ ವಿರುದ್ದ ಟಾಂಗ್ ನೀಡಿದರು. ಎಂಎಲ್‍ಸಿ ಅನಿಲ್‍ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಜಿ.ಪಂ.ಮಾಜಿ ಅಧ್ಯಕ್ಷ ಜನ್ನಘಟ್ಟ ಕೃಷ್ಣಪ್ಪ, ತೋಟಗಾರಿಕೆ ವಿಶ್ವವಿದ್ಯಾನಿಲಯದ ನಿರ್ದೇಶಕ ಮಾದಮಂಗಲ ಮಂಜುನಾಥ್, ಕೋಲಾರ ಜಿಲ್ಲಾ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಸುಗಟೂರು ಸೊಸೈಟಿ ಅಧ್ಯಕ್ಷ ಬಾಬು, ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಪಿ.ಎಸ್.ನಾಗೇಂದ್ರಶೆಟ್ಟಿ, ಸುಗಟೂರು ವಿಶ್ವನಾಥ್, ಮುಳ್ಳಳ್ಳಿ ಚಂದ್ರು, ಸುಮನ್, ಕೇಶವ, ಡಾ.ಮಂಜುನಾಥ್, ವಿ.ಪ್ರಕಾಶ್, ವಿಜಯಕುಮಾರ್, ಮುರಳಿ, ಸಂತೋಷ್, ನವೀನ್ , ಅಭಿಲಾಷ್ ಇದ್ದರು
.