ಶ್ರೀನಿವಾಸಪುರ : ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಹೆಚ್ಚಾಗಿರುವ ನಿಟ್ಟಿನಲ್ಲಿ ಗ್ರಾಹಕರ ಮೇಲೆ ಹೊರೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಎನ್ಜಿ ಗ್ಯಾಸ್ ಬಳಿಸಿಕೊಳ್ಳುವುದರ ಮೂಲಕ ಹಣದ ಹೊರೆ ಕಡಿಮೆ ಮಾಡಿಕೊಳ್ಳುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಗ್ರಾಹಕರಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದ ರಾಜದಾನಿ ಪೆಟ್ರೋಲ್ ಬಂಕ್ ಸಭಾಂಗಣದಲ್ಲಿ ಸೋಮವಾರ ಸಿಎನ್ಜಿ ಗ್ಯಾಸ್ ಬಂಕಿಗೆ ಚಾಲನೆ ನೀಡಿ ಮಾತನಾಡಿದರು.
ರೀಜನಲ್ ಮ್ಯಾನೇಜರ್ ವೆಂಕಟೇಶ್ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ೬ ಕೇಂದ್ರಗಳನ್ನು ತರೆಯಲಾಗಿದ್ದು, ಮೊದಲ ಭಾರಿಗೆ ಶ್ರೀನಿವಾಸಪುರದಲ್ಲಿ ಎಜಿಪಿ,ಸಿಎನ್ಜಿ ಗ್ಯಾಸ್ ಬಂಕ್ನ್ನು ತೆರೆಯಲಾಗಿದ್ದು, ೧ ಕೆಜಿ ಗ್ಯಾಸ್ಗೆ ೮೦ರೂ, ೧ ಕೆಜಿ ಗ್ಯಾಸ್ಗೆ ೫೦ ಕಿಮೀ ಪ್ರಯಣಸಬಹುದು ಎಂದು ತಿಳಿಸುತ್ತಾ, ಗ್ಯಾಸ್ ಕಿಟ್ ಮಾರುಕಟ್ಟೆ ಬೆಲೆ ೨೦ ಸಾವಿರ, ಆದರೆ ನಾವು ನಮ್ಮ ಕಂಪನಿ ಕಡೆಯಿಂದ ಗ್ಯಾಸ್ ಕಿಟ್ನ್ನು ಸಬ್ಸಿಡಿ ದರದಲ್ಲಿ ೧ ಸಾವಿರಕ್ಕೆ ಕೊಡಲಾಗುವುದು . ಗ್ರಾಹಕರು ಈ ಒಂದು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ರಿವಿಜನಲ್ ಮುಖ್ಯ ಕೆಆರ್ ವೆಂಕಟೇಶ್ ಮಾತನಾಡಿ ನಮ್ಮ ಕಂಪನಿಯಿಂದ ಗ್ರಾಹಕರ ಗ್ಯಾಸ್ಗೆ ಸಂಬಂದಿಸಿದ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ ೨೪/೭ ಗಂಟೆಗಳು ನಿಮ್ಮ ಸೇವೆಗಾಗಿ ನಮ್ಮ ಸಿಬ್ಬಂದಿಗಳು ಇರುತ್ತಾರೆ ಎಂದು ಮಾಹಿತಿ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಆಯೀಷನಯಾಜ್, ಸದಸ್ಯ ಏಜಾಜ್ಪಾಷ, ಜಿಲ್ಲಾ ಪಂಚಾಯಿತಿ ಮಾಜಿ ಸದ್ಯಸ ತೂಪಲ್ಲಿ ಆರ್.ನಾರಾಯಣಸ್ವಾಮಿ, ರಾಜದಾನಿ ಪೆಟ್ರೋಲ್ ಬಂಕ್ ಮಾಲೀಕರು ಮುಜಾಯಿದ್ಅನ್ಸಾರಿ, ಜಾಹಿದ್ ಅನ್ಸಾರಿ ,ಅಬಿದ್ ಅನ್ಸಾರಿ, ಮುಖಂಡರಾದ ಲಕ್ಷö್ಮಣರೆಡ್ಡಿ,ಮನು,ಎಪಿಜಿ ಗ್ಯಾಸ್ ಕಂಪನಿ ಜಿಲ್ಲಾ ವ್ಯವಸ್ಥಾಪಕ ಎಸ್.ಆರ್.ಅಶಿತ್, ಅಮೀರ್ ಖಾನ್, ಮಹೇಶ್,ಸುರೇಶ್, ಭಾರತ್ ಪೆಟ್ರೋಲಿಯಂ ವ್ಯವಸ್ಥಾಪಕ ಶುಭಂಸಿಂಗ್, ವಸೀಂ ಇದ್ದರು.