

ಶ್ರೀನಿವಾಸಪುರ : ತಾಲೂಕಿನ ಹೊಗಳಗರೆ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಶುಕ್ರವಾರ ಪಶುಇಲಾಖೆಯಿಂದ ಶ್ರೀನಿವಾಸಪುರ ತಾಲೂಕು ಬರಗಾಲ ಘೋಷಣೆಯಾಗಿರುವ ನಿಟ್ಟಿನಲ್ಲಿ ಸಿಆರ್ಎಫ್ ನಿಧಿಯಿಂದ ಬಂದಿರುವ ಮೇವಿನ ಬೀಜವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿತರಿಸಿದರು
ಹೊಗಳಗರೆ ಪಶುಚಿಕಿತ್ಸಾಲಯ ಕೇಂದ್ರಕ್ಕೆ ಸಂಬಂದಿಸಿದಂತೆ 15 ಹಳ್ಳಿಗಳ ರೈತರಿಗೆ 75 ಕಿಟ್ಗಳನ್ನು ವಿತರಿಸಿದರು. ನೀರಾವರಿ ಇರುವ ಎಲ್ಲಾ ರೈತರಿಗೆ ನೀಡಲಾಗಿದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ರೈತರಿಗೂ ನೀಡಲಾಗುವುದು ಎಂದು ಸ್ಥಳೀಯ ವೈದ್ಯಾಧಿಕಾರಿ ಬಿ.ಮಂಜುನಾಥರೆಡ್ಡಿ ಮಾಹಿತಿ ನೀಡಿದರು.
ಇಒ ಎಸ್.ಶಿವಕುಮಾರಿ , ತಾಲೂಕು ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥರೆಡ್ಡಿ , ಗ್ರಾ,ಪಂ ಸದಸ್ಯ ಆನಂದರೆಡ್ಡಿ, ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ, ರೆಡ್ಡಪ್ಪ ಇತರರು ಇದ್ದ