

ಶ್ರೀನಿವಾಸಪುರ : ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಶ್ರೀನಿವಾಸಪುರ ವಿದಾನ ಸಭಾ ಕೇತ್ರದ ಹೋಳೂರು ಗ್ರಾಮದಲ್ಲಿ ಶನಿವಾರ ೧.೭೫ ಕೋಟಿ ವೆಚ್ಚದಲ್ಲಿನ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು.
ಗ್ರಾಮದಲ್ಲಿನ ೭೫೦ ಮನೆಗಳಿಗೆ ಮನ ಮನೆಗೂ ಗಂಗೆ ಹರಿಸಲಾಗುತ್ತದೆ ಎಂದರು. ಹಾಗೂ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ನ್ನು ರಿಪೇರಿ ಹಾಗು ಗ್ರಾಮದಲ್ಲಿ ೫೦ ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಅನಿತ, ಮುಖಂಡರಾದ ಶಂಕರೇಗೌಡ, ವಿವೇಕ್, ಗಂಗರಾಜು, ನಾರಾಯಣಸ್ವಾಮಿ, ಶಿವಣ್ಣ, ಗುತ್ತಿಗೆದಾರ ಮೋಹನ್, ಇಂಜನೀಯರ್ ದೆವೇಗೌಡ ಇದ್ದರು.