ಶ್ರೀನಿವಾಸಪುರ : ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ರಸ್ತೆ , ಇತರೆ ಕಾಮಗಾರಿಗಳು ಕಳಪೆಯಿಂದ ಇರದಂತೆ ಎಚ್ಚರವಹಿಸುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು .
ಪಟ್ಟಣದ ಅಮಾನಿಕೆರೆಯಂಗಳದಲ್ಲಿ ನಡೆಯುತ್ತಿರುವ ಕ್ರೀಡಾಂಗಣ ಕಾಮಗಾರಿಯನ್ನ ಮಂಗಳವಾರ ವೀಕ್ಷಿಸಿ ಮಾತನಾಡಿದರು.
ಕ್ರೀಡಾಂಗಣ ಕಾಮಗಾರಿಯು ಪ್ರಾರಂಭದ ಹಂತದಲ್ಲಿದ್ದು, ಪ್ರಾರಂಭದಲ್ಲಿಯೇ ವಿಘ್ನವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ ಎಂದು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾದ ಅವಘಡಗಳು ನಡೆಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಟ್ಟಣದಲ್ಲಿ ನಾಲ್ಕು ರಾಜಕಾಲುವೆಗಳು ಇದ್ದು ಅವುಗಳನ್ನ ಸ್ವಚ್ಚ ಪಡಿಸಿ ಸರಿಪಡಿಸುವಂತೆ, ಪಟ್ಟಣದ ಎಸ್ಎಫ್ಎಸ್ ಶಾಲೆ, ಸರ್ಕಾರಿ ಪದವಿ ಕಾಲೇಜು ಬಳಿಯ ಮೂಲಕ ಹಾದು ಹೋಗುವ ರಾಜಕಾಲುವೆಯು ಕಸಕಡ್ಡಿಗಳಿಂದ ತುಂಬಿದ್ದು ಅದನ್ನ ಒಳಚರಂಡಿ ವ್ಯವಸ್ಥೆ ಮಾಡಿಸುಂತೆ ಬಗ್ಗೆ ಪತ್ರಕರ್ತರು ಶಾಸಕರ ಗಮನಕ್ಕೆ ತಂದಾಗ ಪುರಸಭಾ ಮುಖ್ಯಾಧಿಕಾರಿಗಳನ್ನ ಚರ್ಚಿಸಿ ಮುಂದಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಪಟ್ಟಣದಲ್ಲಿ ಕುಡಿಯುವ ನೀರು ಹಾಗೂ ಇತರೆ ಮೂಲ ಸೌಲಭ್ಯಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಸರಿಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಸೂಚಿಸಿದರು. ಹಾಗೂ ಪಟ್ಟಣದ ಸಂತೆ ಮೈದಾನದ ವಸತಿ ನಿಲಯದ ಬಳಿ ಸ್ಥಳ ಪರಿಶೀಲಿಸಿ ಶನಿವಾರ ನಡೆಯುವ ವಾರದ ಸಂತೆ ನಡೆಯಲು ವ್ಯಾಪಾರಸ್ಥರಿಗೆ ಶೆಡ್ ಹಾಕಿಸುವುದಾಗಿ ಭರವಸೆ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ್ನಾಯಕ್, ಪಿಡಬ್ಲುö್ಯಡಿ ಇಂಜನೀಯರ್ ಗಳಾದ ಟಿ.ನಾಗರಾಜ್,ಗೋಪಾಲ್, ಮುಖಂಡ ಪೂಲ್ಶಿವಾರೆಡ್ಡಿ ,ಮೀನು,ಶ್ರೀನಾಥ್, ಇದ್ದರು.