

ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವ ಕುಂದಾಪುರದ ಶಾಸಕರು. ಕುಂದಾಪುರದ ಶಾಸಕರ ಹುಟ್ಟೂರಾದ ಅಮಾವಾಸ್ಯೆಬೈಲಿನ ಅಭಿವೃದ್ಧಿಯಲ್ಲಿ ಸುದೀರ್ಘ ಅವಧಿಯ ರಾಜಕಾರಣಿ ಹಾಲಿ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರ ಕೊಡುಗೆ ಶೂನ್ಯ ಆದರೆ ಈಗ ಪ್ರಸಕ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರುಗಳ ವಿಶೇಷ ಮುತುವರ್ಜಿಯಿಂದ ಸಿ ಎಸ್ ಆರ್ ಅನುದಾನದಡಿ ಅಮವಾಸ್ಯೆಬೈಲು ಗ್ರಾಮ ಪಂಚಾಯತ್ ಗೆ ಸುಮಾರು 25 ಲಕ್ಷ ಅನುದಾನ ಮಂಜೂರಾಗಿದ್ದು, ಕರಾವಳಿಯ ಆರಾಧ್ಯ ದೈವಿ ಪುರುಷರಾದ ಕೋಟಿ ಚನ್ನಯ್ಯರ ಗರಡಿಗೆ ಈ ಅನುದಾನದಡಿ ಐದು ಲಕ್ಷ ರೂಪಾಯಿ ಮಂಜೂರಾಗಿದ್ದು ಈ ಅನುದಾನದ ವಿನಿಯೋಗಕ್ಕೆ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಅನುದಾನದ ಮಂಜೂರಾತಿಗೆ ತಡೆಯನ್ನು ಓಡುತ್ತಿದ್ದಾರೆ. ಯಾವತ್ತೂ ಅಭಿವೃದ್ಧಿಯ ವಿರೋಧಿ ಮನಸ್ಥಿತಿಯ ಶಾಸಕರು ಇನ್ನಾದರೂ ತನ್ನ ಮನಸ್ಥಿತಿಯನ್ನು ಬದಲಾಯಿಸಿ ಅಭಿವೃದ್ಧಿಯ ಪರ ನಿಲ್ಲಲು ಸಾಧ್ಯವಾಗದೆ ಇದ್ದರೂ ತನ್ನೂರಿನ, ತನ್ನ ಕ್ಷೇತ್ರದ ಅಭಿವೃದ್ಧಿಗೆ ತಡೆಯೋಡ್ದುವ ಕಾರ್ಯವನ್ನು ನಿಲ್ಲಿಸಲಿ, ಇಲ್ಲದೆ ಇದ್ದಲ್ಲಿ ಶಾಸಕರ ಅಭಿವೃದ್ಧಿ ವಿರೋಧಿ ಮನಸ್ಥಿತಿಯ ವಿರುದ್ಧ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.