ಕುಂದಾಪುರ; ಪ್ರಥಮ ವರ್ಷಕ್ಕೆ ಸೇರ್ಪಡೆಯಾದ ಎಮ್ ಬಿ ಎ ಮತ್ತು ಏಮ್ ಸಿ ಎ ವಿದ್ಯಾರ್ಥಿಗಳಿಗೆ ಒಂದು ವಾರದ ಓರಿಯೆಂಟೇಷನ್ ಮತ್ತು ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಎಂ. ಬಿ. ಎ ವಿಭಾಗದ ಮುಖ್ಯಸ್ಥರಾದ ಡಾ. ಸುಚಿತ್ರ ಪೂಜಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಮುಖ್ಯ ಅತಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಶಾಂತ್ ಕುಂದರ್ (ಮ್ಯಾನೇಜಿಂಗ್ ಪಾರ್ಟ್ನರ್ ಜನತಾ ಹೊಲ್ಡಿಂಗ್ಸ್ ) ನಾಯಕತ್ವ, ಮತ್ತು ವ್ಯವಹಾರದ ಹೊಸ ದೃಷ್ಠಿಕೋನ ಮತ್ತು ಅಭಿವೃದ್ಧಿಯ ಕುರಿತು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು. ಐ ಎಂ ಜೇ ಸಂಸ್ಥೆಗಳ ಬ್ರಾಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆಯವರು ಉನ್ನತ ವ್ಯಾಸಂಗದ ಉದ್ದೇಶ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೊ . ಅಮೃತ ಮಾಲಾ (ಪ್ಲೇಸ್ ಮೆಂಟ್ ಅಂಡ್ ಟ್ರೇನಿಂಗ್ ಡೀನ್ ) ಇವರು ವೃತ್ತಿ ಮಾರ್ಗದರ್ಶನ ದ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎಂ ಸಿ ಏ ವಿಭಾಗ ಮುಖ್ಯಸ್ಥೆ ಡಾ. ನಂದಿನಿ ಯವರು ಉಪಸ್ಥಿತರಿದ್ದರು. ಎಂ.ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಸಹಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ನೀಲ್ ಗ್ಲಾಡ್ವಿನ್ ವಂದಿಸಿದರು